ಕುಶಾಲನಗರ, ಜ 24: ಚರಂಡಿ ಅಭಿವೃದ್ಧಿ ಹಾಗೂ ಸ್ವಚ್ಚತೆ ನಿರ್ವಹಿಸದ ಗ್ರಾಪಂ ವಿರುದ್ದ ಆಕ್ರೋಷ ವ್ಯಕ್ತಪಡಿಸಿ ನಿವಾಸಿಯೊಬ್ಬರು ಮಣ್ಣು ಹಾಕಿ ಚರಂಡಿ ಮುಚ್ಚಿದ ಘಟನೆ ಕೂಡಿಗೆಯಲ್ಲಿ ನಡೆದಿದೆ.
ಕೂಡಿಗೆ ಸೇತುವೆ ಬಳಿಯ ಹೊಳೆ ರಸ್ತೆಯಲ್ಲಿರುವ ಕಿರಿದಾದ ಚರಂಡಿ ಸ್ವಚ್ಚತೆ ಕಾಣದ ತ್ಯಾಜ್ಯ ತುಂಬಿ ನಿಂತು ಅನಾರೋಗ್ಯಕರ ವಾತಾವರಣ ಸೃಷ್ಠಿಸಿತ್ತು. ಅಲ್ಲದೆ ತ್ಯಾಜ್ಯ ಮುಂದಿನ ಹರಿದು ಸಾಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮನೆ ಮುಂದೆ ತ್ಯಾಜ್ಯ ಶೇಖರಣೆಗೊಳ್ಳುತ್ತಿದ್ದ ಹಿನ್ನಲೆಯಲ್ಲಿ ಗ್ರಾಪಂ ನಿರ್ಲಕ್ಷ್ಯಕ್ಕೆ ಬೇಸತ್ತ ಮಾಜಿ ಸೈನಿಕ ಶ್ರೀಧರ್ ತಮ್ಮ ಮನೆ ಮುಂಭಾಗ ಚರಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ.
Back to top button
error: Content is protected !!