ಕುಶಾಲನಗರ ಡಿ 24: ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಆಶ್ರಯದಲ್ಲಿ 38ನೇ ವರ್ಷದ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮ ನಡೆಯಿತು.
ಎರಡು ದಿನಗಳ ಪೂಜೋತ್ಸವ ಅಂಗವಾಗಿ ಶನಿವಾರ ಪವನಾಮ ಹೋಮ ನಡೆಯಿತು. ಭಾನುವಾರ 38ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಅಂಗವಾಗಿ ರಥಬೀದಿಯ ಆಂಜನೇಯ ದೇವಾಲಯದಲ್ಲಿ
ಬೆಳಿಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಸ್ವಾಮಿಗೆ ಮಹಾಮಂಗಳಾರತಿ ನಂತರ 1 ಗಂಟೆಗೆ ಅನ್ನ ಪ್ರಸಾದ ಸಂತರ್ಪಣೆ ನಡೆಯಿತು. ರಾಧಾಕೃಷ್ಣ ಮತ್ತು ಮಯೂರ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು.
ನೆರದ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಶಾಸಕ ಭೇಟಿ: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ನೆರೆದ ಭಕ್ತರಿಗೆ ಲಾಡು ವಿತರಣೆ ಮಾಡಿದರು.
ಈ ಸಂದರ್ಭ ಉತ್ಸವ ಸಮಿತಿ ಅಧ್ಯಕ್ಷ ವಿ.ಎಚ್.ಪ್ರಶಾಂತ್, ಕಾರ್ಯದರ್ಶಿ ನವನೀತ್ ಪೊನ್ನೇಟಿ,
ಸಹ ಕಾರ್ಯದರ್ಶಿ ಟಿ.ವಿನು, ಖಜಾಂಚಿ ಪ್ರವೀಣ್ ಓಂಕಾರ್, ಸಂಚಾಲಕ ಕೆ.ಎನ್.ಚಂದ್ರಶೇಖರ್ ಸೇರಿದಂತೆ ದೇವಾಲಯ ಸಮಿತಿ ಪ್ರಮುಖರಾದ ರಾಜೀವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಯುವ ಕಾಂಗ್ರೆಸ್ ಪ್ರಮುಖರು ಇದ್ದರು.
Back to top button
error: Content is protected !!