ಚುನಾವಣೆ

ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್‌.ಬಿ. ರವಿ ಅಯ್ಕೆ.

ಕುಶಾಲನಗರ ಡಿ.11: ಶಿರಂಗಾಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಬಿ. ರವಿ, ಉಪಾಧ್ಯಕ್ಷೆಯಾಗಿ ದೇವಿರಮ್ಮ  ಅವಿರೋಧವಾಗಿ ಅಯ್ಕೆಗೊಂಡರು.
ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಧಾನಕ್ಕೆ ಒಂದೊಂದು ನಾಮಪತ್ರಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಸ್‌. ಬಿ. ರವಿ, ಮತ್ತು ದೇವಿರಮ್ಮ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಹಾಲಿ ನಿರ್ದೇಶಕರಾದ ಟಿ ಜೆ. ಶೇಷಪ್ಪ, ಹೆಚ್.ಎಸ್. ಬಸವರಾಜ್, ಎಸ್. ಎಸ್. ಹರ್ಷ, ಎಸ್. ಸಿ. ರುದ್ರಪ್ಪ, ಪೂಜಾ, ಡಿ.ಎ. ಲೋಕೇಶ್, ಸಿ, ಎನ್. ಲೋಕೇಶ್, ಎಸ್. ಜೆ.ಮಧುರಾಜ್, ಪಿ. ಸಿ. ಬೇಲಯ್ಯ, ಎಸ್. ಜಿ .ಲೋಕೇಶ್, ಹಾಜರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಇಲಾಖೆ ಅಧಿಕಾರಿ ಪಿ. ಬಿ. ಮೋಹನ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೀವನ್, ಸಂಘದ ಮೇಲ್ವಿಚಾರಕಿ ಅನುರಾಧ, ನಗದು ಗುಮಾಸ್ತ ರೂಪ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!