ಕ್ರೈಂ

ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿ ಮೊಬೈಲ್ ಕಸಿದ ಪ್ರಕರಣ: ಕುಶಾಲನಗರದ ಇಬ್ಬರು ಪೊಲೀಸರ ವಶ

ಮಾದಾಪಟ್ಟಣದ ಆಟೋ ಚಾಲಕ, ಫರ್ನಿಚರ್ ಅಂಗಡಿ‌ ಮಾಲೀಕ ವಶಕ್ಕೆ

ಕುಶಾಲನಗರ, ನ‌ 14: ಕೇರಳ ಮೂಲದವರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ. 12 ರ ರಾತ್ರಿ ಕಾಸರಗೋಡಿನ ಲೋಹಿತ್ ದಾಸ್, ಜೈಸಿತ್ ಎಂಬವರು ಬೆಂಗಳೂರಿನಿಂದ ಕಾಸರಗೋಡು ತೆರಳುವ ಮಾರ್ಗ ಮಧ್ಯೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆಹೊಸೂರು ಬಳಿ ಕಾರನ್ನು ಅಡ್ಡಗಟ್ಟಿದ್ದ 6 ಮಂದಿ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಸಿದು ಅವರದೇ ವಾಹನ ಚಲಾಯಿಸಿಕೊಂಡು ಹೋಗುವ ಸಂದರ್ಭ ಕಾರು ಪಲ್ಟಿಯಾಗಿತ್ತು.

ಈ ಸಂಬಂಧ ಮಾದಾಪಟ್ಟಣದ ವಿನು, ದಿನು ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದು ಉಳಿದ ನಾಲ್ವರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ಕೃತ್ಯಕ್ಕೆ ಬಳಸಿದ ಬಿಳಿ ಕೊರೊಲ ಕಾರು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇರಳದವರ ವ್ಯಾಗನಾರ್ ಕಾರು ಅಪಘಾತದಲ್ಲಿ ಜಖಂಗೊಂಡಿದೆ.

ಸಂಪೂರ್ಣ ತನಿಖೆ ನಂತರ ಘಟನೆಯ ಸಂಪೂರ್ಣ ವಿವರ ಹಾಗೂ ಕೃತ್ಯದ ಉದ್ದೇಶ ತಿಳಿದುಬರಲಿದೆ ಎಂದು ಕುಶಾಲನಗರ ಗ್ರಾಮಾಂತರ ಠಾಣೆಗೆ ಭೇಟಿ‌ ನೀಡಿ ಆರೋಪಿಗಳ ವಿಚಾರಣೆ ನಡೆಸಿ ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.

ಈ ಸಂದರ್ಭ ಡಿವೈಎಸ್ಪಿ ಗಂಗಾಧರ್, ಸಿಐ ಸಿದ್ದರಾಜು, ಠಾಣಾಧಿಕಾರಿ ಮೋಹನ್ ರಾಜು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!