ಕಾರ್ಯಕ್ರಮ

ಕುಶಾಲನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

ಕುಶಾಲನಗರ  ನ 04 : ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಭಾಷೆಗೆ ಕನ್ನಡಿಗರಿಂದಲೇ ಪೆಟ್ಟು ಬೀಳುತ್ತಿದೆ ಎಂದು ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಲೀಲಾಕುಮಾರಿ ತೊಡಿಕಾನ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಕರ್ನಾಟಕ ಸುವರ್ಣ ಸಂಭ್ರಮ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕನ್ನಡಕ್ಕೆ ತನ್ನದೇ ಆದ ಶಕ್ತಿ ಇದೆ.ಆದರೂ ನಶಿಸಿ ಹೋಗುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡದ ಹೆಸರು ಸೇರ್ಪಡೆಯಾಗಿರುವುದು ಬೇಸರ ತಂದಿದೆ.ಆದರೆ ಇದು ಕನ್ನಡಿಗರ ನಿರ್ಲಕ್ಷ್ಯ ಮತ್ತು ಪ್ರತಿಷ್ಟೆಯಿಂದ ಕನ್ನಡ ನಶಿಸಿ ಹೋಗುತ್ತಿದೆಯೇ ವಿನಹ ಬೇರೆ ಭಾಷೆಯ ದಬ್ಬಾಳಿಕೆಯಿಂದಲ್ಲ ಎಂದು ಸ್ಪಷ್ಟ ಪಡಿಸಿದರು.
ಮಕ್ಕಳ ಪೋಷಕರು ತಮ್ಮ ಪ್ರತಿಷ್ಟೆಗಾಗಿ ಅಪ್ಪ, ಅಮ್ಮ ಹೇಳಿಸುವ ಬದಲಾಗಿ ಮಮ್ಮಿ, ಡ್ಯಾಡಿಯ ಬಳಕೆ ಮಾಡಿಸುತ್ತಿರುವುದು ಕನ್ನಡಕ್ಕೆ ಬಂದಿರುವ ದೊಡ್ಡ ಕೊಡಲಿ ಪೆಟ್ಟು.ಕನ್ನಡದ ಜೋತೆಯಲ್ಲಿ ಅನ್ಯಭಾಷೆಗೂ ಗೌರವ ನೀಡಬೇಕು.ಆದರೆ ಅನ್ಯ ಭಾಷೆಗೆ ಮಾರುಹೋಗದೆ ಎಷ್ಟು ಬಳಕೆ ಮಾಡಬೇಕೋ‌ ಅಷ್ಟಕ್ಕೆ ಸೀಮಿತಗೊಳಿಸಬೇಕಾಗಿದೆ.ಕನ್ನಡವೇ ನಮ್ಮ ಉಸಿರಾಗಬೇಕು.ಅದರ ಬಗ್ಗೆ ಕೀಳರಿಮೆ ಆಗಬಾರದು.ಅನ್ಯ ಭಾಷೆಯಿಂದ ಖಂಡಿತಚಾಗಿಯೂ ಕನ್ನಡ ನಶಿಸುತ್ತಿಲ್ಲ ಎಂಬುದರ ಬಗ್ಗೆ ಅರಿವಿರಲಿ.ಸೃಜನಶೀಲತೆ ಎಂಬುದು ಕನ್ನಡದಲ್ಲಿ ಮಾತ್ರ ಸಿಗಲಿದೆ.ಕನ್ನಡ ಭಾಷೆಗೆ ತನ್ನದೇ ಆದ ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯ, ಸಂಸ್ಕಾರ ನೀಡಿದೆ ಎನ್ನುವುದನ್ನು ಯಾರೂ ಮರೆಯಬಾರದು.ಎಲ್ಲ ಭಾಷಿಗರಿಗೂ ಆಶ್ರಯ ನೀಡುವ ಕನ್ನಡ ನಾಡಿಗೆ ದ್ರೋಹ ಮಾಡಿದರೆ ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ ಎಂದರಲ್ಲದೇ ಶಿಕ್ಷಣ ವ್ಯವಸ್ಥೆಯಲ್ಲಿ ಕುಸಿತ ಕಂಡುಬಂದಿದ್ದರಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮಾತನಾಡುವ ಮತ್ತು ಬರೆಯುವ ಪ್ರವೃತ್ತಿ ಕಳೆದುಹೋಗಿದೆ.ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ, ಯುವ ವಾಘ್ಮಿ ಶ್ರೀಶಾ ಮಾತನಾಡಿ, ರಾಜ್ಯ ಪುನರ್ವಿಂಗಡನೆಯ ಅವಧಿಯಲ್ಲಿ ವಿಶಾಲ ಮೈಸೂರು ರಾಜ್ಯ ಎಂಬ ಹೆಸರಿದ್ದ ಕನ್ನಡ ನಾಡಿಗೆ 1973 ರಲ್ಲಿ ಕರ್ನಾಟಕ ರಾಜ್ಯ ಎಂಬ ಹೆಸರು ನಾಮಕರಣವಾಗಿದ್ದು, ಈ ವರ್ಷ 50 ವರ್ಷ ತುಂಬಿರುವುದು ನಮ್ಮ ಹೆಮ್ಮೆ ಎಂದ ಅವರು, ಮೈಸೂರು ರಾಜ್ಯದಿಂದ ಕರ್ನಾಟಕ ರಾಜ್ಯದವರೆಗೆ ಹಂತ ಹಂತದ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡಳು.
ಕಾರ್ಯಕ್ರಮವನ್ಬು ಉದ್ಘಾಟಿಸಿ ಮಾತನಾಡಿದ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗೇಶ್ ಮಾತನಾಡಿ, ಕನ್ನಡ ಭಾಷೆ ಮುದ್ದಾದ ಮತ್ತು ಸಿಹಿಯಾದ ಭಾಷೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕನ್ನಡ ಉಳಿದಿದೆ.ಆದರೆ ನಗರ ಪ್ರದೇಶದಲ್ಲಿ ಕನ್ನಡ ತನ್ನತನವನ್ನು ಕಳೆದುಕೊಳ್ಳುತ್ತಿರುವುದು ದುರಂತ.ನಾವು ಕನ್ನಡವನ್ನು ಉಳಿಸಿ ಬೆಳೆಸಿದ್ದಾಗ ಮಾತ್ರ ಕನ್ನಡಕ್ಕೆ ಉಳಿವು ಸಿಗಲಿದೆ.ಹಾಗೆಯೇ, ಕನ್ನಡ ಉಳಿವಿಗಾಗಿ ನನ್ನ ಕೊಡುಗೆ ಏನಿದೆ ಎಂಬುದು ಮನವರಿಕೆಯಾಗಬೇಕಾಗಿದೆ ಎಂದರು.
ಕಾರ್ಯಕ್ತಮದ ಮೊದಲಿಗೆ ಕನ್ನಡಾಂಭೆಗೆ ಪುಷ್ಪರ್ಚನೆ ಅರ್ಪಿಸಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಎಂ‌.ಪ್ರವೀಣ್ ಕುಮಾರ್ ವಹಿಸಿದ್ದರು.
ಐಕ್ಯೂಎಸ್ ಸಂಚಾಲಕಿ ಎಂ.ರಶ್ಮಿ, ಕನ್ನಡ ವಿಭಾಗದ ಮುಖ್ಯಸ್ಥ ಸುನಿಲ್ ಕುಮಾರ್, ಉಪನ್ಯಾಸಕರಾದ ಹರ್ಷ ಕುಮಾರ್, ಸುಧಾಕರ್ ಶೆಟ್ಟಿ, ರಮೇಶ್ ಚಂದ್ರ, ಕುಸುಮ, ವಂದನ, ರಾಧಿಕಾ, ಸೂರ್ಯ, ರಾಜೇಶ್, ಚರಣ್ ರಾಜ್, ನಟರಾಜ್, ಮನೋಜ್, ಹರ್ಷಿತಾ, ಶಾಲಿನಿ, ದೈಹಿಕ ಶಿಕ್ಷಣ ನಿರ್ದೇಶಕಿ ಪಿ.ಪಿ.ಜಯಂತಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!