ಚುನಾವಣೆ

ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ

ಕೆ.ಕೆ. ಹೇಮಂತ್ ಕುಮಾರ್ ತಂಡಕ್ಕೆ ಬಹುಮತ

ಕುಶಾಲನಗರ ಅ 12:  ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಸಂಘದ ಸಭಾಂಗಣದಲ್ಲಿ ನಡೆಯಿತು.

2023-28ನೇ ಸಾಲಿನ ಆಡಳಿತ ಮಂಡಳಿಗೆ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಗುರುವಾರ ನಡೆದು ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಬಣದ 10 ಮಂದಿ ಗೆಲುವು ಸಾಧಿಸಿದರು.

ಸಾಲಗಾರರ ಸಾಮಾನ್ಯ ಕ್ಷೇತ್ರದ ದಿಂದ ನಾಗರಾಜ್, ರಾಮಚಂದ್ರ, ಕೃಷ್ಣೇಗೌಡ, ಕುಮಾರ್‌, ಅರುಣ್ ಕುಮಾರ್, ಸಾಲಗಾರ ಮಹಿಳಾ ಕ್ಷೇತ್ರದಿಂದ‌ ಕೆ. ಕೆ. ಪವಿತ್ರ‌ ಮತ್ತು ಜಯಶ್ರೀ ಆಯ್ಕೆಯಾದರು.

ಸಾಲಗಾರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎಸ್ .ಆರ್. ಅರುಣ್ ರಾವ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ರಮೇಶ್, ಸಾಲಗಾರ ಹಿಂದುಳಿದ ವರ್ಗ “ಬಿ,” ಕ್ಷೇತ್ರದಿಂದ ಕೆ. ಪಿ.ರಾಜು, ಸಾಲಗಾರರ ಹಿಂದುಳಿದ ವರ್ಗ “ಎ” ಕ್ಷೇತ್ರದಿಂದ ಎಸ್ .ಎಸ್‌. ಕೃಷ್ಣ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ವಿ. ಬಸಪ್ಪ ಗೆಲುವು‌ ಸಾಧಿಸಿದರು.

ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಕಣದಲ್ಲಿ ಒಟ್ಟು 28 ಅಭ್ಯರ್ಥಿಗಳು ಸ್ಪರ್ಧಿಸಿದರು. ಚುನಾವಣೆಯ ಮತಚಲಾಯಿಸಲು 1914 ಸಾಲಗಾರರ ಸದಸ್ಯರು ಮತ್ತು 750 ಸಾಲಗಾರರಲ್ಲದ ಸದಸ್ಯರು ಅರ್ಹರಾಗಿದ್ದರು. ಇದರಲ್ಲಿ 1682 ಸದಸ್ಯರು ಚುನಾವಣೆಯಲ್ಲಿ ಮತದಾನ ಚಲಾಯಿಸಿದರು.

13 ಮಂದಿ ಆಡಳಿತ ಮಂಡಳಿಯ ಸಮಿತಿಯಲ್ಲಿ ಓರ್ವ ನಿರ್ದೇಶಕರಾಗಿ ನಿಕಟಪೂರ್ವ ಅಧ್ಯಕ್ಷ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ. ಕೆ. ಹೇಮಂತ್ ಕುಮಾರ್ ಈಗಾಗಲೆ ಅವಿರೋಧವಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ 12 ಸ್ಧಾನಗಳಿಗೆ, ಸಹಕಾರ ಸಂಘದ ವ್ಯಾಪ್ತಿಯ ವಿವಿಧ ಕ್ಷೇತ್ರವಾರು ಹಾಗೂ ಮೀಸಲಾತಿ ಅನ್ವಯ ಚುನಾವಣೆಯು ನಡೆಯಿತು.

ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆ ಅಧಿಕಾರಿ ಪಿ. ಬಿ. ಮೋಹನ್ ಅವರ ನೇತೃತ್ವದಲ್ಲಿ ವಿವಿಧ ಸಹಕಾರ ಸಂಘಗಳ ನೌಕರರ ಸಹಕಾರದೊಂದಿಗೆ ಚುನಾವಣಾ ಪ್ರಕ್ರಿಯೆಗಳು ನಡೆದವು.

Related Articles

Leave a Reply

Your email address will not be published. Required fields are marked *

Back to top button
error: Content is protected !!