ಪ್ರಕಟಣೆ

ಸೆ.26: ಹಾಸನದಲ್ಲಿ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಕಾರ್ಯಕ್ರಮ

ಕುಶಾಲನಗರ, ಸೆ 24: ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಸೆ.26 ರಂದು ಮಂಗಳವಾರ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತಿ ಅಂಗವಾಗಿ ಪುಷ್ಪನಮನ ಹಾಗೂ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ದಿವ್ಯ ಆಶಿರ್ವಾದದೊಂದಿಗೆ ಪ್ರಶಾಂತ್ ಕಲ್ಲೂರು ಅವರ ನೇತೃತ್ವದಲ್ಲಿ ಅಂದು ಹಾಸನ ಕಲಾಭವನ ಬಳಿಯ ಭಗವಾನ್ ಮಹಾವೀರ ವೃತ್ತದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಾಸನ ನಗರದಲ್ಲಿ‌ ಮೊಟ್ಟಮೊದಲ ಬಾರಿಗೆ ಸುತ್ತೂರು ಶ್ರೀ ಕ್ಷೇತ್ರದ ರಾಜಗೋಪುರ ಮಾದರಿಯ ವಿಶೇಷ ಮಂಟಪ ರಚನೆ ಗಮನಸೆಳೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!