ಸಭೆ

ಕೂಡಿಗೆ ಗ್ರಾಪಂ ಮಾಸಿಕ ಸಭೆ: ಪರವಾನಗಿ ರಹಿತ ಮಾಂಸದಂಗಡಿ‌ ಮುಚ್ಚಲು‌ ನಿರ್ಣಯ

ಕುಶಾಲನಗರ, ಆ 24:
ಕೂಡಿಗೆ ಗ್ರಾಮ ಪಂಚಾಯತಿಯ ಮಾಸಿಕ ಸಭೆ ಗ್ರಾಪಂ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯು ಆರಂಭದಲ್ಲಿ ಲೆಕ್ಕಪತ್ರವನ್ನು ಮಂಡನೆ ಮಾಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗೆ ಬರುವ ಆದಾಯ ಮೂಲಗಳ ಬಗ್ಗೆ ಚರ್ಚೆಗಳು ನಡೆಯಿತು. ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಳಿ, ಕುರಿ, ಮೀನು ಮಾರಾಟ ಅಂಗಡಿಗಳ ಮಾಲೀಕರು ವಹಿವಾಟು ನಡೆಸಲು ಗ್ರಾಮ ಪಂಚಾಯತಿಯಿಂದ ಪರವಾನಗಿ ತೆಗೆದುಕೊಳ್ಳದೆ ಅನಧಿಕೃತವಾಗಿ ಅಂಗಡಿಗಳನ್ನು ನಡೆಸುತ್ತಿರುವುರಿಂದಾಗಿ ಪಂಚಾಯ್ತಿಗೆ ಬರುವ ವರಮಾನ ಕಡಿಮೆಯಾಗುತ್ತಿದೆ. ಅಂಗಡಿ ಮಾಲೀಕರಿಗೆ ಹಲವು ಬಾರಿ ಸೂಚಿಸಿದರು ಇದುವರೆಗೂ ಪರವಾನಗಿಯನ್ನು ಪಡೆದಿಲ್ಲ. ಅಂತಹ ಅಂಗಡಿಗಳನ್ನು ಮುಚ್ಚುವಂತೆ ಸರ್ವ ಸದಸ್ಯರು ಒಕ್ಕೂರಲಿನ ತೀರ್ಮಾನ ಕೈಗೊಂಡರು.
ನಂತರ ಸಭೆಯಲ್ಲಿ 15 ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಲಾಯಿತು. ಹಾಜರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡ್ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಒಳಗೊಂಡಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಿದರು.
ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಉಪ ಗ್ರಾಮಗಳ ಅಭಿವೃದ್ಧಿ ಪೂರಕವಾದ ಯೋಜನೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದರ ಮೂಲಕ ಹಂತ ಹಂತವಾಗಿ ಅತ್ಯವಶ್ಯಕವಾದ ಕಾಮಗಾರಿಗಳನ್ನು ‌ತೆಗೆದುಕೊಂಡು ಪೂರ್ಣಗೊಳಿಸುವ ಮೂಲಕ ಗ್ರಾಮದ ಪ್ರಗತಿಗೆ ಸಹಕಾರಿಗಳಾಗುವ ಎಂದರು.
ಅಭಿವೃದ್ಧಿ ಅಧಿಕಾರಿ ಸಿ.ಎಸ್. ಮಂಜುಳಾ ಸರಕಾರದ ಹೊಸ ಯೋಜನೆಯ ಮಾಹಿತಿಯನ್ನು ಸಭೆಗೆ ತಿಳಿಸಿದರು. ಸಭೆಗೆ ಬಂದ ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿಗೆ ಸಂಬಂಧಿಸಿದಂತೆ ಸಭೆಗೆ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಟಿ. ಪಿ.ಹಮೀದ್, ಅನಂತ್, ಅರುಣ್ ರಾವ್, ಶಿವಕುಮಾರ್, ಚಂದ್ರು, ಮೋಹಿನಿ ತಮ್ಮಣ್ಣೇಗೌಡ, ಮಂಗಳ, ರತ್ನಮ್ಮ, ಜಯಶೀಲಾ, ವಾಣಿ, ಲಕ್ಷ್ಮಿ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!