ಕ್ರೀಡೆ

ಪೋಲೀಸರ ಕ್ರೀಡಾವಳಿ.. ಕುಶಾಲನಗರ ಡಿವೈಎಸ್ಪಿ ಗಂಗಾಧರ್ ಸಾಧನೆ….

ಕುಶಾಲನಗರ, ನ 21 : ಕಳೆದ ಮೂರು ದಿನಗಳ ಕಾಲ ಜಿಲ್ಲಾ ಕೇಂದ್ರ ಮಡಿಕೇರಿಯ ಪೋಲೀಸ್ ಕ್ರೀಡಾಂಗಣದಲ್ಲಿ ಜರುಗಿದ ಪೋಲೀಸ್ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿವಿಧ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ತಾಲ್ಲೂಕು ಪೋಲೀಸ್ ಉಪ ಅಧೀಕ್ಷಕರಾದ ಆರ್.ವಿ.ಗಂಗಾಧರ್ ಅವರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಅಮೋಘ ಸಾಧನೆ ಗೈದಿದ್ದಾರೆ.
ಷಟಲ್ ಕಾಕ್ ಪಂದ್ಯಾವಳಿಯ ಸಿಂಗಲ್ಸ್ ನಲ್ಲಿ ಪ್ರಥಮ ಬಹುಮಾನ, ಡಬಲ್ಸ್ ನಲ್ಲಿ ದ್ವಿತೀಯ ಬಹುಮಾನ, ಪಿಸ್ತೂಲ್ ಶೂಟಿಂಗ್ ನಲ್ಲಿ ಪ್ರಥಮ, ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ, ರೈಫಲ್ ಶೂಟಿಂಗ್ ನಲ್ಲಿ ದ್ವಿತೀಯ ಹಾಗೂ ಶಾಟ್ ಪುಟ್ ನಲ್ಲಿ ದ್ವಿತೀಯ ಸ್ಥಾನ ಗಳನ್ನು ಗಳಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ತಾಲ್ಲೂಕಿನ ಹಿರಿಯ ಅಧಿಕಾರಿಯ ಸಾಧನೆಗೆ ತಾಲ್ಲೂಕಿನ ಎಲ್ಲಾ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ವಂದಿಗಳು ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!