ಕುಶಾಲನಗರ, ನ 02: ಜೆಸಿಐ ಇಂಡಿಯಾದ ವಲಯ 14ರ ಉಪಾಧ್ಯಕ್ಷರಾಗಿ ಕೊಡಗಿನ ಕುಶಾಲನಗರದ ಕೆ.ಡಿ. ಪ್ರಶಾಂತ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ 32ನೇ ವಲಯ ಸಮ್ಮೇಳನದಲ್ಲಿ 2023ನೇ ಸಾಲಿನ ಜೂನಿಯರ್ ಚೇಂಬರ್ ಇಂಟರ್ನ್ಯಾಶನಲ್ (ಜೆಸಿಐ) ಭಾರತದ ವಲಯ 14ರ ಉಪಾಧ್ಯಕ್ಷರಾಗಿ ಜೆಸಿ ಪ್ರಶಾಂತ್ ಅವರನ್ನು ಆಯ್ಕೆ ಮಾಡಲಾಯಿತು. ಯುವ ಉದ್ಯಮಿಯಾಗಿ ಕುಶಾಲನಗರದಲ್ಲಿ ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರ ಹಾಗೂ ಇನ್ಸುರೆನ್ಸ್ ಗಳ ವ್ಯವಹಾರ ನಡೆಸುತ್ತಿರುವ ಪ್ರಶಾಂತ್ ಅವರು 2018 ರಲ್ಲಿ ಜೆಸಿಐ ಕುಶಾಲನಗರ ಕಾವೇರಿ ಘಟಕದ ಸದಸ್ಯತ್ವವನ್ನು ಪಡೆದರು. ಮತ್ತು 2019 ರಲ್ಲಿ ಜೆಸಿಐ ಕುಶಾಲನಗರ ಕಾವೇರಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ 2022 ರಲ್ಲಿ ಜೆಸಿಐ ಇಂಡಿಯಾದ ವಲಯ XIV ರ ವಲಯ ನಿರ್ದೇಶಕನಾಗಿ ಪ್ರಮುಖ ಎರಡು ವಿಭಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. JCI ಒಂದು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ ಯುವಕರು ಮತ್ತು ಯುವತಿಯರ ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಇದು ಯುವ ನಾಯಕರು ಮತ್ತು ಉದ್ಯಮಿಗಳ ವಿಶ್ವಾದ್ಯಂತ ಒಕ್ಕೂಟವಾಗಿದೆ. ಅದರಂತೆ 2002 ರಲ್ಲಿ ಸ್ಥಾಪನೆಯಾದ ಜೆಸಿಐ ಕುಶಾಲನಗರ ಕಾವೇರಿ ಘಟಕವೂ ಸಹ ಪ್ರತಿಷ್ಠಿತ ಘಟಕಗಳಲ್ಲಿ ಒಂದಾಗಿದ್ದು ಇದೀಗ ಪ್ರಶಾಂತ್ ರವರು ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಕುಶಾಲನಗರ ಘಟಕಕ್ಕೆ ಹಿರಿಮೆ ಬಂದಂತಾಗಿದೆ.
Back to top button
error: Content is protected !!