ಕಾರ್ಯಕ್ರಮ

ಕುಶಾಲನಗರ ತಾಲ್ಲೂಕು ಆಡಳಿತ ಹಾಗು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೀತಗಾಯನ

ಕುಶಾಲನಗರ, ಅ 28: ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಶುಕ್ರವಾರ ಏಕಕಾಲದಲ್ಲಿ ಮೂಡಿ ಬಂದ ಕೋಠಿ ಕಂಠ ಗೀತ ಗಾಯನ ಕುಶಾಲನಗರದ ಕಾರು ನಿಲ್ದಾಣದಲ್ಲಿ ನಡೆಯಿತು. ಕುಶಾಲನಗರ ತಾಲ್ಲೂಕು ಆಡಳಿತ ಹಾಗು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜರುಗಿದ ಕೋಠಿ ಕಂಠ ಗಾಯನದಲ್ಲಿ ಕುಶಾಲನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳಿಂದ ನಾಡಗೀತೆಗಳು ಮೊಳಗಿದವು.
ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಟಿ.ಎಂ.ಪ್ರಕಾಶ್, ಉಪತಹಸೀಲ್ದಾರ್ ಮಧುಸೂದನ್, ಕಂದಾಯ ಅಧಿಕಾರಿ ಸಂತೋಷ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ, ಉಪಾಧ್ಯಕ್ಷೆ ಸುರಯ್ಯಭಾನು, ಸಿಒ ಶಿವಪ್ಪ‌ನಾಯಕ್, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಅಧ್ಯಕ್ಷ ಚಂದ್ರಮೋಹನ್, ಕಲಾವಿದರಾದ ಪರಮೇಶ್, ಸತೀಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!