ಕ್ರೀಡೆ

ಬ್ಯಾಡಗೊಟ್ಟ ಗ್ರಾಮದಲ್ಲಿ ಪುನಿತ್ ಮೆಮೋರಿಯಲ್ ಫುಟ್ಬಾಲ್ ಪಂದ್ಯಾಟ

ಕುಶಾಲನಗರ, ಅ 11: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಯುವಕ ಸಂಘದ ವತಿಯಿಂದ ಪುನಿತ್ ರಾಜ್ ಕುಮಾರ್ ಜ್ಞಾಪಕಾರ್ಥವಾಗಿ ಹಮ್ಮಿಕೊಂಡ ಪ್ರಥಮ ವರ್ಷದ ಪುನಿತ್ ಮೆಮೋರಿಯಲ್ ಕಫ್ ಪುಟ್ಬಾಲ್ ಪಂದ್ಯಾಟ ಗ್ರಾಮದ ಮೈದಾನದಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ 22 ತಂಡಗಳು ಭಾಗವಹಿಸಿ ಇದರಲ್ಲಿ ಕುಶಾಲನಗರದ ಕೆ.ಎಫ್.ಸಿ ತಂಡ ಪ್ರಥಮ ಸ್ಥಾನವನ್ನು ಪಡೆದು ಅಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಟೀಮ್ ಮೇಟ್ರಕ್ ತಂಡ ಪಡೆದುಕೊಂಡಿತು.
ಬಹುಮಾನ ವಿತರಣೆಯನ್ನು ಜೆ.ಡಿ. ಎಸ್. ಪಕ್ಷದ ಮುಖಂಡರಾದ ನಾಪಂಡ ಮುತ್ತಪ್ಪ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾ ಕೂಟಗಳು ನಡೆಯುವುದರಿಂದ ಗ್ರಾಮದಲ್ಲಿ ಸೌಹಾರ್ದ ಮನೋಭಾವ ಬೆಳೆಯಲಿದೆ. ಗ್ರಾಮಸ್ಥರ ಒಗ್ಗೂಡುವಿಕೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪೂರಕವಾಗುವುದು ಎಂದರು.
ಕ್ರೀಡಾಕೂಟದ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ ಡಾ.ಮಂಥರ್ ಗೌಡ ನೆರವೇರಿಸಿ ಮಾತನಾಡಿ, ಯುವಜನಾಂಗ ಸಂಘಟಿತರಾದರೆ ಸಮಾಜ ಅಭಿವೃದ್ಧಿ ಸಾಧ್ಯ. ಕ್ರೀಡೆ ಮನುಷ್ಯನ ಅರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದರು
ಸಭೆಯ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಟಿ.ಪಿ.ಹಮೀದ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜೆ.ಡಿ.ಎಸ್. ಪಕ್ಷದ ಮುಖಂಡ ಅಜ್ಜಳ್ಳಿ ರವಿ, ಉದ್ಯಮಿ ಗಳಾದ ಬಿ.ಡಿ. ಅಣ್ಣಯ್ಯ, ಭಾಷಾ, ಕುಶಾಲನಗರ ತಾಲ್ಲೂಕು ಜೆ ಡಿ ಎಸ್ ಅಧ್ಯಕ್ಷ ಪಿ. ಡಿ. ರವಿ, ಸ್ಥಳೀಯ ಪ್ರಮುಖರಾದ ಉದಯ, ಕೆ.ವೈ. ಮುತ್ತ ,ಶಂಕರ್, ಯುವಕ ಸಂಘದ ಸದಸ್ಯರಾದ ಸಂಜು, ಮಂಜು, ಮಣಿಕಂಠ,ಗಣೇಶ್, ಪ್ರಸಾದ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!