ದೇವಾಲಯ

ಬೆಟ್ಟಗೇರಿಯಲ್ಲಿ ನಡೆಯುತ್ತಿದೆ ಶ್ರೀ ಚೌಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ

ಗುಡ್ಡೆ ಹೊಸೂರು, ನ 22: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಜೀವನದಿ ಕಾವೇರಿ ನದಿ ತಟದ ಪುಣ್ಯ ಭೂಮಿಯಲ್ಲಿ ಪುರಾತನ ಕಾಲದ ಕೌಶಿಕ ಮುನಿಯಿಂದ ಪ್ರತಿಷ್ಠಾಪಿಸಿದ ಶ್ರೀ ಚೌಡೇಶ್ವರಿ ದೇವಿಯ ಗುಡಿಯು ಪೂಜೆ ನಡೆಸದೆ ನೆನೆಗುದಿಗೆ ಬಿದ್ದಿತ್ತು. ಗ್ರಾಮವಾಸಿಗಳು ಆ ಕಾಲದಿಂದಲೂ ಗುಡಿಯಲ್ಲಿ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದರು. ನಂತರ ಆ ಕಾಲಕ್ರಮೇಣ ಗುಡಿಯು ನಾಶವಾಗುತ್ತಾ ಬಂದಿತ್ತು. ಅಲ್ಲದೆ ಮೂಲಸ್ಥಾನವನ್ನು ಬಿಟ್ಟು ಗ್ರಾಮದ ವಿವಿಧ ಭಾಗಗಳಲ್ಲಿ ದೇವಿಯ ಪೂಜೆಯನ್ನು ಮಾಡುವುದು ಹಾಗೂ ಆರಾಧನೆ ಮಾಡುವುದು ಸರಿ ಇಲ್ಲ ಎಂಬುದಾಗಿ ಹಾಗೂ ದೇವಿಗೆ ತೃಪ್ತಿ ಇಲ್ಲ ಎಂಬುದಾಗಿ 17-3-2008 ರಲ್ಲಿ ಹೇಳಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಆದುದರಿಂದ ಎಲ್ಲಾ ಗ್ರಾಮವಾಸಿಗಳಿಗೆ, ಎಲ್ಲಾ ಗುಣಗಳು ಸಿಗಬೇಕಾದರೆ ಸಾರ್ವಜನಿಕವಾಗಿ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿ ದೇವಿಯ ಮೂಲ ಸ್ಥಾನದಲ್ಲಿ ದೇವಸ್ಥಾನ ಕಟ್ಟಿ ಎಲ್ಲಾ ಗ್ರಾಮ ವಾಸಿಗಳು ಸೇರಿ ಆರಾಧನೆ ಮಾಡಬೇಕೆಂದು ಕಂಡುಬಂದಿದ್ದು. ಈ ಕಾರಣಕ್ಕಾಗಿ ಗ್ರಾಮಸ್ಥರ ತಂಡ ಒಂದು ಸಮಿತಿಯನ್ನು ನಿರ್ಮಾಣ ಮಾಡಿ ಕರ್ನಾಟಕದ ಪ್ರಸಿದ್ಧ 9 ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿಂದ ಪ್ರಸಾದ ತಂದು ಕೊನೆಗೆ ಕ್ಷೇತ್ರದಲ್ಲಿ ಗಣಪತಿ ಹೋಮ ಹಾಗೂ ವಿವಿಧ ಪೂಜೆಗಳನ್ನು ನಡೆಸಲಾಯಿತು. ತದನಂತರ ಗರ್ಭಗುಡಿಯ ಸುಮಾರು 12 ಹಳೆಯ ಹಾಳದಿಂದ ತಳಪಾಯವನ್ನು ಏರಿಸಲಾಯಿತು. ದೇವಸ್ಥಾನದ ಜಾಗವು ರಸ್ತೆಯ ವ್ಯಾಪ್ತಿಯಿಂದ ಹಲವಾರು ಅಡಿಯಷ್ಟು ಗುಂಡಿಯಲ್ಲಿತ್ತು . ಆ ಜಾಗಕ್ಕೆ ಸಾವಿರಾರು ಲೋಡು ಮಣ್ಣು ಹಾಕಿ , ಸಮತಟ್ಟು ಮಾಡಲಾಯಿತು. ಮಂದಗತಿಯಲ್ಲಿ ನಡೆಸಲಾಯಿತು. ಹಲವಾರು ವರ್ಷಗಳಿಂದ ದೇವಸ್ಥಾನದ ಕೆಲಸವೂ ಅರ್ಧಕ್ಕೆ ನಿಂತಿತ್ತು. ಇದಕ್ಕೆ ಮೂಲ ಕಾರಣ ಆರ್ಥಿಕ ಪರಿಸ್ಥಿತಿ. ಈ ದೇವಸ್ಥಾನದ ಒಟ್ಟು ವೆಚ್ಚವು ಒಂದು ಕೋಟಿ ಐದು ಲಕ್ಷದ ಎಸ್ಟಿಮೇಶನ್ ನೊಂದಿಗೆ ನಡೆಯಲಿದೆ. ಈ ಹಿಂದೆ ಮುಜರಾಯಿ ಇಲಾಖೆಯಿಂದ, ಹಾಗೂ ಎಂಪಿ ಪಂಡಿನಿಂದಲೂ ಅಲ್ಪ ಸ್ವಲ್ಪ ಹಣ ಬಿಡುಗಡೆಯಾಗಿತ್ತು. ಆಗಿನ ಶಾಸಕರಾದ ಅಪ್ಪಚ್ಚು ರಂಜನ್ ಅವರ ಶಾಸಕರ ನಿಧಿಯಿಂದ ಸ್ವಲ್ಪ ಹಣ 5 ಲಕ್ಷ ಹಣ ಬಿಡುಗಡೆಯಾಗಿತ್ತು. ಇದೀಗ ಪ್ರಸ್ತುತ ಶಾಸಕರಾದ ಡಾ. ಮಂತರ್ ಗೌಡ ಅವರಲ್ಲಿಗೂ ಅರ್ಜಿಯನ್ನು ನೀಡಲಾಗಿದೆ. ಅಲ್ಲದೆ ಗ್ರಾಮಸ್ಥರಿಂದಲೂ ಸಾರ್ವಜನಿಕರಿಂದಲೂ ದೇಣಿಗೆಯನ್ನು ಪಡೆದು ದೇವಸ್ಥಾನದ ಕೆಲಸವನ್ನು ಮುಂದುವರಿಸಲಾಗಿದೆ. ಈ ದೇವಸ್ಥಾನವು ಸಿದ್ಧಾಪುರ ರಸ್ತೆ ಗುಡ್ಡೆ ವಸೂರಿನಿಂದ ಎರಡು ಕಿಲೋಮೀಟರ್ ಅಂತರದಲ್ಲಿ ರಸ್ತೆ ಬದಿಯಲ್ಲಿ ಕಾಣಸಿಗುತ್ತದೆ. ದೇವಸ್ಥಾನವನ್ನು ಪ್ರಾರಂಭಿಸುವುದಕ್ಕಿಂತ ಮೊದಲು ಆ ಜಾಗದಲ್ಲಿ ಮಣ್ಣಿನ ದೋಷದ ಪರಿಹಾರಕ್ಕಾಗಿ ನಾಗರ ಬನವನ್ನು ನಿರ್ಮಿಸಿ ಸುಮಾರು 6 ವರ್ಷಗಳಿಂದ ವಿವಿಧ ಪೂಜೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಮೂಲ ಗುಡಿಯು ಸಿಥಿಲ ಅವಸ್ಥೆಗೊಂಡಿದೆ . ಮೂಲಸ್ಥಾನದಲ್ಲಿ ದೇವಿಯ ಗುಡಿಯ ಜೊತೆ , ಶ್ರೀ ವೀರಭದ್ರ ಸ್ವಾಮಿ, ಶ್ರೀ ಮುನೇಶ್ವರ ದೇವರ ಗುಡಿಯನ್ನು ಮತ್ತು ಮೂಲಸ್ಥಾನದಿಂದ ಸ್ವಲ್ಪ ಅಂತರದಲ್ಲಿ ಬಲಿ ದೇವಿಯ ಗುಡಿಯನ್ನು ನಿರ್ಮಾಣ ಮಾಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನ ಸಮಿತಿಯ ಸರ್ವರ ಪ್ರಯತ್ನದಿಂದ ದೇವಸ್ಥಾನದ ಕೆಲಸವು ಬರದಿಂದ ಸಾಗುತ್ತಿದೆ, ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಅಲ್ಲಿನ ಬಿಬಿ ಶಿವಕುಮಾರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಹಲವಾರು ಮಂದಿ ಸಹಾಯ ಹಸ್ತ ನೀಡಿದ್ದಾರೆ. ಇನ್ನು ಮುಂದೆಯೂ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಕಾರ ಮಾಡಿದಲ್ಲಿ ದೇವಸ್ಥಾನದ ಕೆಲಸ ಪೂರ್ಣಗೊಳ್ಳಲಿದೆ. ಗ್ರಾಮದ ಅಭಿವೃದ್ಧಿಗಾಗಿ ನಡೆಯುತ್ತಿರುವ ಈ ಕಾರ್ಯಕ್ಕೆ ಸರ್ವರೂ ಸಹಕಾರ ನೀಡುವಂತೆ ದೇವಸ್ಥಾನ ಸಮಿತಿಯವರು ವಿನಂತಿಸಿಕೊಂಡಿದ್ದಾರೆ. ಮೂಲಗುಡಿಯಲ್ಲಿ ಅಲ್ಲಿನ ನಿವಾಸಿಗಳು ಇಂದಿಗೂ ಪ್ರತಿನಿತ್ಯ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ದೇವಿಯು ಶಕ್ತಿಯುತವಾಗಿದ್ದು ಭಕ್ತರ ನಂಬಿಕೆಗೆ ಪೂರಕವಾಗಿದೆ. ಭಕ್ತಿಯಿಂದ ಪೂಜಿಸುವವರಿಗೆ ಇಂದಿಗೂ ವರವನ್ನು ನೀಡುತ್ತಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ಸಮೀಪದ ರಾಮನ್ ಎಂಬ ತಂತಿಯವರಿಂದ ದೇವಸ್ಥಾನದ ಕಾರ್ಯವನ್ನು ಮುಂದುವರಿಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!