ಕಾಮಗಾರಿ

ಕಾವೇರಿ ನೀರಾವರಿ ನಿಗಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಭೂಮಿ ಪೂಜೆ

ಕುಶಾಲನಗರ, ನ 17: ಕಾವೇರಿ ನೀರಾವರಿ ನಿಗಮದ ಮೂಲಕ ರೂ 5 ಕೋಟಿ ವೆಚ್ಚದಲ್ಲಿ ಕುಶಾಲನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು.

ರೂ 5 ಕೋಟಿ ವೆಚ್ಚದಲ್ಲಿ ಕುಶಾಲನಗರ ಪ್ರವಾಸಿ‌ ಮಂದಿರ ವೃತ್ತದಿಂದ ಹಾರಂಗಿ ಇಲಾಖಾ ಕಛೇರಿ ತನಕ‌ ಮತ್ತು ಜನತಾ ಕಾಲೋನಿಯ ಅಡ್ಡ ರಸ್ತೆಗಳು, ಕಾಂಪೌಂಡ್ ಹಾಗು ಜನತಾ ಕಾಲೋನಿ ಜಂಕ್ಷನ್ ಬಳಿ ಒಟ್ಟು
2 ಕಿಮೀ ರಸ್ತೆ ಅಭಿವೃದ್ಧಿ, ಡ್ರೈನೇಜ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
ಶೀಘ್ರದಲ್ಲೇ ರಸ್ತೆ ಕಾಮಗಾರಿ‌ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಯಾವುದೇ ಕಾರಣಕ್ಕೂ ವಿಳಂಭ ಮಾಡಬಾರದು ಎಂದು ಸೂಚಿಸಿದರು. ಶೀಘ್ರದಲ್ಲೇ ಹಾರಂಗಿಯಲ್ಲಿ‌ ಬೋಸ್ಟ್ರಿಂಗ್ ಬ್ರಿಡ್ಜ್ ನಿರ್ಮಾಣಕ್ಕೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಕಾಂಗ್ರೆಸ್ ಪ್ರಮುಖ ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್
ಪ್ರದಾನ ಕಾರ್ಯದರ್ಶಿ ವಿ.ಎಸ್.ಆನಂದಕುಮಾರ್, ಮಾಜಿ ಜನಪ್ರತಿನಿಧಿಗಳಾದ ಎಂ.ಕೆ.ದಿನೇಶ್, ಜಗದೀಶ್, ಶಿವಶಂಕರ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಎಂ.ಎಂ.ಪ್ರಕಾಶ್, ಪ್ರಮುಖರಾದ ಶಿವಕುಮಾರ್, ಚಂದನ್ ಕುಮಾರ್, ಹೆಬ್ಬಾಲೆ ರಂಜನ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!