ಸಭೆ

ಹೆಬ್ಬಾಲೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

ಕುಶಾಲನಗರ, ಸೆ 27 : ಸಮೀಪದ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬನಶಂಕರಿ ಸಮುದಾಯ ಭವನದ ಆವರಣದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಚ್.ಟಿ.ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ,
ಸಂಘದ ಅಧ್ಯಕ್ಷ ಎಚ್.ಟಿ.ಮೋಹನ್ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ,ಮಧ್ಯಮಾವಧಿ ಸಾಲ ಸೌಲಭ್ಯಗಳನ್ನು ರೈತ ಸದಸ್ಯರಿಗೆ ವಿತರಿಸಲಾಗುತ್ತಿದೆ ಎಂದು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು
2025-26ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯ ಚಟುವಟಿಕೆ ನಡೆಸಿದ್ದು, ರೂ.15.5 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಹೇಳಿದರು.ಗ್ರಾಮೀಣಾ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಸಹಕಾರ ಸಂಘ ಶ್ರಮಿಸುತ್ತಿದ್ದು, ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಪೂರೈಸುತ್ತಿದೆ. ಸದಸ್ಯರು ಸಂಘದಿಂದ ಸಿಗುವ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಒತ್ತು ನೀಡಬೇಕು ಎಂದರು.
ಸಂಘವು 3300 ಸದಸ್ಯರನ್ನು ಹೊಂದಿದೆ.ರೂ.1.26 ಕೋಟಿ ಪಾಲು ಬಂಡವಾಳ ಹಾಗೂ ಸರ್ಕಾರದ ಷೇರು ರೂ.16.650 ಷೇರು ಬಂಡವಾಳವನ್ನು ಹೊಂದಿದೆ.2025-26ನೇ ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕ್ ಮೂಲಕ ರೂ.9.92 ಕೋಟಿ ಕೆಸಿಸಿ ಸಾಲವನ್ನು ಪಡೆದು ಸದಸ್ಯರಿಗೆ ವಿತರಿಸಲಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು .ಸಂಘದ ಏಳಿಗೆಗೆ ಸರ್ವ ಸದಸ್ಯರ ಸಹಕಾರ ತುಂಬ ಅಗತ್ಯ ಎಂದರು. ಸಹಕಾರಿ ಕಾನೂನು ಪ್ರಕಾರ ಒಂದು ಆಡಳಿತ ಅವಧಿಯ ಕನಿಷ್ಠ ಮೂರು ಮಹಾಸಭೆಗಳಿಗೆ ಸದಸ್ಯರು ಹಾಜರಾಗುವುದು ಕಡ್ಡಾಯ. ತಪ್ಪಿದಲ್ಲಿ ಸದರಿ ಸದಸ್ಯತ್ವವನ್ನು ತಟಸ್ಥವಾಗುವುದು ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಗಿರೀಶ್ ಮಾತನಾಡಿ,ಸಂಘದ ಕ್ಷೇಮ ನಿಧಿಗೆ ರೂ.38,9587.23,
ಶಿಕ್ಷಣ ನಿಧಿಗೆ ರೂ.23375.23,ಡೆಡ್ ಸ್ಟಾಕ್ ಸವಕಳಿ ನಿಧಿಗೆ ರೂ.130574.06,ಮುಳುಗುವ ಸಾಲ ನಿಧಿಗೆ ರೂ.57269.32,ಕಟ್ಟಡ ನಿಧಿಗೆ ರೂ.210659.48, ಸಿಬ್ಬಂದಿ ಕಲ್ಯಾಣ ನಿಧಿಗೆ ರೂ.63197.84,ಸಿಬ್ಬಂದಿ ಬೊನಸ್ಸು ನಿಧಿಗೆ ರೂ.252635.89,ಸದಸ್ಯರಿಗೆ ಡಿವಿಡೆಂಟ್ ರೂ.316145.70 ನಿವ್ವಳ ಲಾಭಾಂಶದಲ್ಲಿ ಕಾಯ್ದಿರಿಸಲಾಗಿದೆ ಎಂದರು.ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.
ಸಂಘದ ಉಪಾಧ್ಯಕ್ಷೆ ಸರೋಜಮ್ಮ,ನಿರ್ದೇಶಕರಾದ ಎಚ್.ಎಸ್.ಅಂಬಿಕಾ,ಎಚ್.ಎಸ್.ಕೇಶವ,ಎಚ್.ಟಿ.ನಾರಾಯಣ, ಎಚ್.ಆರ್.ಪ್ರದೀಪ್ ಕುಮಾರ್, ಎಚ್.ಎನ್.ಮಹಾದೇವ, ಎಂ.ಎಂ.ಮಹಾದೇವ,ಎಚ್.ಆರ್.ಮಣಿಕಂಠ,ಎಚ್.ಜೆ.ರವಿ.,ಹೆಚ್.ಎಸ್.ಶರತ್ ಕುಮಾರ್, ಎಚ್.ವಿ.ಸೋಮಶೇಖರ್, ಮೇಲ್ವಿಚಾರಕಿ ಎಂ.ಕೆ.ಗೀತಾ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್ ಕುಮಾರ್ ಪಾಲ್ಗೊಂಡಿದ್ದರು. ಇದೇ ಸಂದರ್ಭ ಲೆಕ್ಕಾಧಿಕಾರಿ ಕೆಲಸ ನಿರ್ವಹಿಸಿ ವರ್ಗಾವಣೆಗೊಂಡ ಗೀತಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಸಭೆಯ ಮೊದಲಿಗೆ ನಡೆದ ಚರ್ಚೆಯಲ್ಲಿ ಸಂಘದ ಕೆಲವು ಲೋಪದೋಷಗಳನ್ನು ನೆರೆದಿದ್ದ ಸದಸ್ಯರುಗಳು ಪ್ರಸ್ತಾಪಿಸಿದಾಗ ಸ್ವಲ್ಪ ಗೊಂದಲ ಉಂಟಾದರೂ ಸಂಘದ ಅಧ್ಯಕ್ಷರು ಸಮರ್ಪಕವಾದ ಉತ್ತರವನ್ನು ನೀಡಿ ಸಮಸ್ಯೆಯನ್ನು ತಿಳಿಗೊಳಿಸಿದರು. ಸದಸ್ಯರಾದ ಜಯಂತಿ,ಎಚ್.ಟಿ.ದಿನೇಶ್, ಶಿವರಾಮ್ ,ಪ್ರಕಾಶ್, ಗಣೇಶ್,ಮೋಹನ್,ಪುಟ್ಟರಾಜು,ಸುಭಾಷ್,ಶೇಖರ್ ಮತ್ತಿತರ ಚರ್ಚೆಯಲ್ಲಿ ಪಾಲ್ಗೊಂಡು ಸಂಘದ ಅಭಿವೃದ್ಧಿಗೆ ಪೂರಕ ಸಲಹೆಗಳನ್ನು ನೀಡಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!