ಧಾರ್ಮಿಕ

ಬಾರವಿ ಕಾವೇರಿ ಕನ್ನಡ ಸಂಘದಿಂದ ಆರತಿ ಪೂಜಾ ಕಾರ್ಯಕ್ರಮ

ಕುಶಾಲನಗರ ಸೆ 27: ಬಾರವಿ ಕಾವೇರಿ‌ ಕನ್ನಡ ಸಂಘದ ವತಿಯಿಂದ ಭಾದ್ರಪದ ಹುಣ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ‌‌ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 163ನೇ ಹುಣ್ಣಿಮೆ ಪೂಜಾ ಕೈಂಕರ್ಯ ಜರುಗಿತು.

ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಕಾವೇರಿ ಮಾತೆಗೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ
ಮಹಾಮಂಗಳಾರತಿ‌ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನೆರವೇರಿಸಲಾಯಿತು. ಉತ್ತಮ ಮಳೆ ಬೆಳೆ, ನಾಡಿನ ಸಮೃದ್ದಿಗಾಗಿ ಪ್ರಾರ್ಥಿಸಲಾಯಿತು.

ಬೆಂಗಳೂರಿನ ಸುನಂದಾ ಕೌಶಿಕ್ ಮತ್ತು ಬೇಲೂರಿನ ವನಿತಾ ಸುರೇಶ್ ಅವರು ದಿನದ ಪೂಜಾ ಸೇವಾರ್ಥ ನೆರವೇರಿಸಿದರು.

ಈ ಸಂದರ್ಭ ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಮಾತನಾಡಿ, ಪ್ರತಿ ಜೀವರಾಶಿಗೂ ನೀರು ಅತ್ಯಗತ್ಯ. ಕೊಡಗಿನ ಕಾವೇರಿ ಬಗ್ಗೆ ಪೂಜ್ಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಬಾರವಿ ಸಂಘ ಪ್ರತಿ ತಿಂಗಳು ಆರತಿ ಪೂಜೆ ನೆರವೇರಿಸುವ ಮೂಲಕ ಎಲ್ಲರಲ್ಲಿ ಭಕ್ತ ಭಾವ ಮೂಡಿಸಲು ಪ್ರೇರಕರಾಗಿರುವುದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು.

ಬಾರವಿ ಕಾವೇರಿ ಕನ್ನಡ‌ ಸಂಘದ ಪ್ರಮುಖರಾದ ರವೀಂದ್ರ ಪ್ರಸಾದ್ ಮಾತನಾಡಿ, ಅಕ್ಟೋಬರ್ ನಲ್ಲಿ ಕಾವೇರಿ ಸಂಕ್ರಮಣ ಪ್ರತಿ ವರ್ಷದಂತೆ ಈ ವರ್ಷ ಕೂಡ ಕಾವೇರಿ ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸತೀಶ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು.

ಪೂಜಾ ಕಾರ್ಯಕ್ರಮದಲ್ಲಿ
ಬಾರವಿ ಕಾವೇರಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಇ.ಟಿ.ಚಂದ್ರು, ರಾಜರಾಜೇಶ್ವರಿ ಚಂದ್ರು, ತಿಲಕ್ ಪೂಜಾರಿ, ಕಾವೇರಿ‌ಮಣಿ, ರುದ್ರೇಶ್, ವೆಂಕಪ್ಪ, ದೇವರಾಜು, ರವಿ, ಮಹಾತ್ಮಾ, ಶಂಕರ್ ಕೊಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!