ಮಳೆ

ಹಾರಂಗಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಅಧಿಕ ಮಳೆ: ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿ ಹೊರಹರಿವು

ಕೂಡಿಗೆ, ಜು.31: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬಾರಿ ಮಳೆ ಬಿಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಒಳ ಹರಿವಿನ ನೀರಿನ ಪ್ರಮಾಣವು ಹೆಚ್ಚಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ಅಣೆಕಟ್ಟೆಯ ಮುಖ್ಯ ಕ್ರಸ್ಟ್‌ ಗೇಟ್ ಗಳ ಮೂಲಕ ನದಿಗೆ 13. ಸಾವಿರ ಕ್ಕೂ ಹೆಚ್ಚು ಕ್ಯೂಸೇಕ್ಸ್ ನೀರನ್ನು ಹರಿಸಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಹೇಶ್ ಮಾಹಿತಿ ನೀಡಿರುತ್ತಾರೆ.
ಈಗಾಗಲೇ ಅಣೆಕಟ್ಟೆಗೆ ಒಳ ಹರಿವು 11. ಸಾವಿರದ 800, ಕ್ಯೂಸೇಕ್ಸ್ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾಗಿ ಬರುತ್ತಿರುವ ನೀರನ್ನು ನದಿಗೆ ಮುಖ್ಯ ಬಾಗಿಲು ಮತ್ತು ವಿದ್ಯುತ್ ಘಟಕದ ಮುಖೇನ ನದಿಗೆ ಹರಿಸಲಾಗುತ್ತಿದೆ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಐ ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಗ್ರಾಮಸ್ಥರು ,ಸಾರ್ವಜನಿಕರು ನದಿ ಅಂಚಿಗೆ ತಮ್ಮ ಜಾನುವಾರುಗಳನ್ನು ಬಿಡದ ಹಾಗೆ ಮುನ್ನೆಚ್ಚರಿಕೆ, ಹಾಗೂ ನದಿ ತೀರದ ಮನೆಯವರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆಯ ವತಿಯಿಂದ ಸೂಚನೆ ನೀಡಲಾಗಿದೆ ಅದನ್ನು ಪಾಲನೆ ಮಾಡುವಂತೆ ಸಂಬಂಧಿಸಿದ ಇಲಾಖೆಯ ಇಂಜಿನಿಯರ್ ಮನವರಿಕೆ ಮಾಡಿರುತ್ತಾರೆ. ಹಾಗೂ ವ್ಯಾಪ್ತಿಯ ಗ್ರಾಮ ಪಂಚಾಯತಿಯ ಅಧಿಕಾರಿ ವರ್ಗದವರು ಸಂಬಂಧಿಸಿದ ವಿಷಯದ ಬಗ್ಗೆ ನದಿ ತೀರದ ನಿವಾಸಿಗಳಿಗೆ ತಿಳುವಳಿಕೆ ನೀಡುವಂತೆ ಮನವಿ ಮಾಡಿರುತ್ತಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ನೀರಾವರಿ ಇಲಾಖೆಯ ಮೂಲಕ ಈಗಾಗಲೇ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಗೆ ಮಾಹಿತಿಯನ್ನು ನೀಡಲಾಗಿದೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಣೆಕಟ್ಟೆಯ ಉಸ್ತುವಾರಿ. ಇಂಜಿನಿಯರ್ ಕಿರಣ್ ದೇವಯ್ಯ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!