ಅವ್ಯವಸ್ಥೆ

*ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಲು ಆರ್.ಕೆ.ಚಂದ್ರ ಒತ್ತಾಯ*

ಕುಶಾಲನಗರ, ಜು 12: ಚಿಕ್ಲಿಹೊಳೆ ಜಲಾಶಯಕ್ಕೆ ತೆರಳುವ ಮಾರ್ಗದಲ್ಲಿ ಕಾಡು ಗಿಡ ಮರಗಳು ವಿದ್ಯುತ್ ಲೈನ್ ಆವರಿಸಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಕಂಡುಬಂದಿದೆ. ಹೆದ್ದಾರಿಯಿಂದ ಚಿಕ್ಲಿಹೊಳೆ ಗೆ ತೆರಳುವ ಮಾರ್ಗದಲ್ಲಿರುವ ಬಸ್ ನ ತಂಗುದಾಣ ಮತ್ತು ತಪಾಸಣಾ ಗೇಟ್ ನಡುವಿನಲ್ಲಿ ಈ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಜೋರಾದ ಗಾಳಿಗೆ ಮರದ ರೆಂಬೆಗಳು ಅಲುಗಾಡಿ ವಿದ್ಯುತ್ ತಂತಿ ಸ್ಪರ್ಶಿಸುವ ಕಾರಣ ಈ‌ ಮಾರ್ಗದ ಮನೆಗಳಿಗೆ ಆಗಾಗ್ಯೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಈ ಅವ್ಯವಸ್ಥೆ ಬಗ್ಗೆ ಚೆಸ್ಕಾಂ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಂಜರಾಯಪಟ್ಟಣ ಗ್ರಾಪಂ ಮಾಜಿ ಸದಸ್ಯ ಆರ್.ಕೆ.ಚಂದ್ರ ಆರೋಪಿಸಿದ್ದಾರೆ. ಚೆಸ್ಕಾಂ ಮೂಲಕ ಮರದ ರೆಂಬೆ, ಕಾಡು ತೆರವು ಸಾಧ್ಯವಾಗದಿದ್ದಲ್ಲಿ ನಮಗೆ ತಿಳಿಸಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿಕೊಟ್ಟಲ್ಲಿ ನಾವೇ ಕಾಡು ಕಡಿಯಲು ವ್ಯವಸ್ಥೆ ಮಾಡಿಕೊಳ್ಳುವುದಾಗಿ ಚೆಸ್ಕಾಂ ನಿರ್ಲಕ್ಷದ ಬಗ್ಗೆ ಆರ್.ಕೆ. ಚಂದ್ರ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!