ಅಪಘಾತ

ಮಾದಾಪಟ್ಟಣದಲ್ಲಿ ನಾಯಿಗಳ‌ ಮೇಲೆ ವಾಹನ ಚಲಾಯಿಸಿ ಕ್ರೌರ್ಯ: ಆರೋಪಿ ವಶಕ್ಕೆ

ಕುಶಾಲನಗರ, ಜೂ 24: ಕುಶಾಲನಗರದ ಮಾದಾಪಟ್ಟಣದ ಕಾಶಿ ವಿಶ್ವನಾಥ ದೇವಾಲಯ ಬಳಿ ರಸ್ತೆಯಲ್ಲಿ‌‌ ಮಲಗಿದ್ದ 5 ನಾಯಿಗಳ ಮೇಲೆ ನೀಚನೊಬ್ಬ ಜೀಪು ಚಲಾಯಿಸಿ ಗಾಯಗೊಳಿಸಿದ ಘಟನೆ ನಡೆದಿದೆ.

ಘಟನೆಯಲ್ಲಿ ಮೂರು ನಾಯಿಗಳಿಗೆ ಸೊಂಟಕ್ಕೆ ತೀವ್ರ ಘಾಸಿಯಾಗಿದೆ. ಈ ಕೃತ್ಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿತ್ತು. ಈ ಸಂಬಂಧ ದಿಲೀಪ್ ಎಂಬವರು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಮ್ಮ ಒಂದು ಸಾಕು ನಾಯಿ ಜೊತೆಗೆ ಇತರೆ 4 ಬೀದಿ ‌ನಾಯಿಗಳು ರಸ್ತೆಯಲ್ಲಿರುವುದನ್ನು ಕಂಡರೂ ಹಾರ್ನ್ ಮಾಡದೆ ಉದ್ದೇಶಪೂರ್ವಕವಾಗಿ ಜೀಪು ಹರಿಸಿ ನಾಯಿಗಳ ಅಂಗಾಂಗ ಊನಗೊಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಜೀಪ್ ಚಾಲಕ ಮಾದಾಪಟ್ಟಣ ನಿವಾಸಿ ಬಾಪುಟ್ಟಿ ಎಂಬವರ ಪುತ್ರ ಅಲಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!