ಕುಶಾಲನಗರ, ಫೆ 10: ಪಂಚ ಸಂದೇಶ ಬಗ್ಗೆ ಜಾಗೃತಿಯ ಜೊತೆಯಲ್ಲಿ ಪ್ರಸ್ತುತ ಹಿಂದೂಗಳ ಸ್ಥಿತಿಯನ್ನು ನೋಡಿದಾಗ ಇಂತಹ ಹಿಂದೂ ಸಂಗಮಗಳ ಅವಶ್ಯಕತೆ ಬಹಳಷ್ಟಿದ ಎಂದು ಜಿಲ್ಲಾ ಕಾರ್ಯ ವಾಹಕರಾದ ರವಿಕುಮಾರ್ ತಿಳಿಸಿದರು.
ಅವರು ತೊರೆನೂರು ಗ್ರಾಮದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಅಯೋಜಿಸಿದ್ದ ಬೃಹತ್ ಶೋಭಾಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಪರಿವರ್ತನೆಗೆ ಪಂಚಕಾರ್ಯಗಳು ಬಹು ಮುಖ್ಯ. ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಜೀವನ, ಸ್ವದೇಶಿ, ನಾಗರಿಕ ಕರ್ತವ್ಯ ಪ್ರಜ್ಞೆ ಇವುಗಳ ಮೂಲಕ ಜಾಗೃತಿ ಮೂಡಿಸುವುದು ಹಿಂದೂ ಸಂಗಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯವನ್ನು ವಹಿಸಿ ಮಾತನಾಡಿದರು. ಪಾಶ್ಚಾತ್ಯ ಸಂಸ್ಕತಿಯ ಅಕರ್ಷಣೆಗೆ ಒಳಗಾಗದೆ ಭಾರತೀಯತೆಯನ್ನು ಕುಟುಂಬ ಅನುಷ್ಠಾನಿಸಿದಾಗ ಸದೃಡ ಸಮಾಜವು ರೂಪಗೊಳುತ್ತದೆ. ರಾಷ್ಟ್ರ ರಕ್ಷಣೆ ಮತ್ತು ಧರ್ಮ ರಕ್ಷಣೆಗಾಗಿ ಸದಾ ಒಗ್ಗಟ್ಟಾಗಿರಬೇಕು ಎಂದರು.
ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತೊರೆನೂರು ಗ್ರಾಮದ ಹಿಂದೂ ಸಂಗಮ ಅಯೋಜನಾ ಸಮಿತಿಯ ಪ್ರಮುಖರಾದ ಹೆಚ್. ಬಿ ಚಂದ್ರಪ್ಪ, ಟಿ.ಎಲ್ ಮಹೇಶ್ ಕುಮಾರ್, ಟಿ.ಸಿ.ಶಿವಕುಮಾರ್, ಟಿ. ಬಿ ಜಗದೀಶ್, ಕೆ.ಬಿ . ದೇವರಾಜ್, ಚಿದಾನಂದ, ಈಶ್ವರಪ್ಪ ಸೇರಿದಂತೆ ಗ್ರಾಮಸ್ಥರು ವಿವಿಧ ಮಹಿಳಾ ಸಂಘಟನೆಯ ನೂರಾರು ಮಹಿಳೆಯರು ಕಳಸ ಹೊತ್ತು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
Back to top button
error: Content is protected !!