ಕ್ರೈಂ

ಮಾಂದಲಪಟ್ಟಿ: ವೈಟ್ ಬೋರ್ಡ್ ವಾಹನಕ್ಕೆ ಹಳದಿ ಬೋರ್ಡ್ ಅಳವಡಿಕೆ: ಜೀಪ್ ಚಾಲಕನ ವಿರುದ್ದ ಪ್ರಕರಣ

ಕುಶಾಲನಗರ, ಜ 27: ಕೊಡಗು ಜಿಲ್ಲೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರುವ ಪ್ರವಾಸಿ ತಾಣವಾದ ಮಾಂದಲಪಟ್ಟಿಗೆ ಸಂಬಂಧಿಸಿದ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ದಿನಾಂಕ 26-01-2026 ರಂದು ವೈರಲ್ ಆಗಿರುತ್ತದೆ. ಸದರಿ ವಿಡಿಯೋವನ್ನು ಪರಿಶೀಲನೆ ಮಾಡಲಾಗಿ ವಿಡಿಯೋದಲ್ಲಿ ಬೆಂಗಳೂರಿನಿಂದ ಬಂದ ಅಂಕಿತಾ ಮತ್ತು ಕುಟುಂಬ ವರ್ಗದವರು ಪ್ರವಾಸ ಸಂಬಂಧ ಕೊಡಗಿನ ಮಾಂದಲಪಟ್ಟಿಗೆ ತೆರಳಲು 25-01-2026 ರಂದು ಕೆಎ-12-ಪಿ-7631ರ ವಾಹನವನ್ನು ವಿಚಾರಿಸಿದ್ದಾಗ 4000/- ಬಾಡಿಗೆ ಎಂದು ತಿಳಿಸಿರುತ್ತಾರೆ ನಂತರ ಜಿಲ್ಲಾಧಿಕಾರಿಗಳು ಮಾಂದಲಪಟ್ಟಿ ಪ್ರವಾಸಿ ತಾಣಕ್ಕೆ ತೆರಳುವ ಚಾಲಕ/ಮಾಲೀಕರ ಸಭೆ ಕರೆದು 2500/- ಹಣ ಪಡೆಯುವಂತೆ ಸೂಚನೆ ನೀಡಿ ಪ್ರವಾಸಿಗರಿಗೆ ಕಾಣುವ ರೀತಿಯಲ್ಲಿ ಬೋರ್ಡ್ ಆಳವಡಿಸಿರುವುದರ ಬಗ್ಗೆ ತಿಳಿಸಿದಾಗ 4000/-ಬಾಡಿಗೆ ಎಲ್ಲಾರೂ ತೆಗೆದುಕೊಳ್ಳುತ್ತಾರೆ ನೀವು ಪಾವತಿ ಮಾಡಬೇಕೆಂದು ತಿಳಿಸಿರುತ್ತಾನೆ ಅಂಕಿತಾ ಮತ್ತು ಕುಟುಂಬ ವರ್ಗದವರು ಕೆಎ-12-ಪಿ-7631ರ ವಾಹನದಲ್ಲಿ ತೆರಳಿದ್ದು, ಅರಣ್ಯ ಇಲಾಖೆಯ ಚೆಕ್ ಪೋಸ್ಟ್ಗೆ 500/- ರೂ. ಹಣ ನೀಡಬೇಕೆಂದು ಹಣ ಪಡೆದು 50 ರೂ. ಮಾತ್ರ ನೀಡಿರುತ್ತಾನೆ. ನಂತರ ಮಾಂದಲಪಟ್ಟಿಯಲ್ಲಿ ಪ್ರವಾಸ ಮುಗಿಸಿ ಬಂದಾಗ ಹೆಚ್ಚುವರಿಯಾಗಿ 500 ರೂ. ಹಣ ನೀಡಬೇಕು ಎಂದು ಜೋರು ಮಾಡಿ ಗದರಿಸಿ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿರುವ ಬಗ್ಗೆ ತಮಗೆ ಆದ ಅನ್ಯಾಯದ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವಾಹನ ಸಂಖ್ಯೆ ಕೆಎ-12-ಪಿ-7631 ಮತ್ತು ಆರೋಪಿ ಶವಿನ್  ಕುಮಾರ್ ಎಂದು ತಿಳಿಸಿರುತ್ತಾರೆ.

ಈ ವಿಡಿಯೋ ಬಗ್ಗೆ ಮಾಹಿತಿ ಪಡೆದ ಕೂಡಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ್ ಹೆಚ್.ವಿ. ಮತ್ತು ಮಡಿಕೇರಿ ಸಂಚಾರಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಧರ್‌ರವರ ತಂಡ ಮಡಿಕೇರಿ ನಗರ, ನಂದಿಮೊಟ್ಟೆ ಮಾಂದಲಪಟ್ಟಿಯಲ್ಲಿ ಜೀಪಿನ ಬಗ್ಗೆ ವಿಚಾರಣೆ ಮಾಡಿ ಜೀಪು ಚಾಲಕ ಮತ್ತು ಜೀಪು ಪತ್ತೆ ಹಚ್ಚಿ ಜೀಪು ಚಾಲಕ ಶವಿನ್ ಕುಮಾರ್ ಎಂದು ತಿಳಿದು ಬಂದಿರುತ್ತದೆ. ಆರೋಪಿ ಶವಿನ್ ಕುಮಾರ್ ನಡೆದ ಘಟನೆ ಬಗ್ಗೆ ವಿಚಾರಣೆ ಮಾಡಲಾಗಿ ಪ್ರಾಥಮಿಕ ತನಿಖೆಯಿಂದ 4500/- ರೂ. ಹಣ ಪಡೆದಿರುವುದು ತಿಳಿದು ಬಂದಿರುತ್ತದೆ. ವಾಹನದ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ವಾಹನ ವೈಟ್ ಬೋರ್ಡ್ ವಾಹನವಾಗಿದ್ದು ನಂಬರ್ ಪ್ಲೇಟ್ ಮೇಲೆ ಹಳದಿ ಬಣ್ಣದ ಬೋರ್ಡ್ ಹಾಕಿ ಬಾಡಿಗೆ ಮಾಡುತ್ತಿರುವುದು ಕಂಡು ಬಂದಿದ್ದು, ಆರೋಪಿ ಶವಿನ್ ಕುಮಾರ್ ಮತ್ತು ವಾಹನ ಕೆಎ-12-ಪಿ-7631ರನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಠಾಣೆಯಲ್ಲಿ ಆರೋಪಿ ಶವಿನ್ ಕುಮಾರ್ ಮೇಲೆ ಕಲಂ: 281 ಬಿಎನ್ಎಸ್ & 192(ಎ) ಐಎಂವಿ ಕಾಯ್ದೆ ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!