ಸಭೆ

ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ

ಕುಶಾಲನಗರ, ಜ 04: ಕುಶಾಲನಗರ ಪುರಸಭೆ ವ್ಯಾಪ್ತಿಯ 4ನೇ ಬ್ಲಾಕ್ ನ ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ
ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಬಡಾವಣೆಯ ಕಟ್ಟಡದಲ್ಲಿ ನಡೆಯಿತು.

ಸಮಿತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಖಜಾಂಚಿ ರೇಣುಕಾ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಡಾವಣೆ ಅಭಿವೃದ್ಧಿಗೆ ಎಲ್ಲಾ ನಿವಾಸಿಗಳ ಪಾಲ್ಗೊಳ್ಳುವಿಕೆ, ಸಹಕಾರ ಸಲಹೆ, ಸೂಚನೆ ಅಗತ್ಯ. ಸಮಾನ ಮನಸ್ಕರಿಂದ ರಚನೆಗೊಂಡ ಬಡಾವಣೆ ಹಿತರಕ್ಷಣಾ ಸಮಿತಿ ಮೂಲಕ ಸಂಘಟಿತರಾಗಿ ಬಡಾವಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದರು.
ನಂತರ ಅವರು ವಾರ್ಷಿಕ ಖರ್ಚು ವೆಚ್ಚದ ವರದಿ ವಾಚಿಸಿದರು.

ಸಂಘದ ಕಛೇರಿ ಕಟ್ಟಡ ನಿರ್ಮಾಣ, ಆಡಳಿತ ಮಂಡಳಿಗೆ ಹೊಸ ನಿರ್ದೇಶಕರ ಸೇರ್ಪಡೆ, ಸದಸ್ಯತ್ವ ನೋಂದಣಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಎಲ್ಲಾ ಧರ್ಮದವರನ್ನು ಒಳಗೊಂಡ‌ ಸಮಿತಿ ರಚನೆಗೆ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ವಿವಿಧ ಧರ್ಮೀಯರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಅಗಲಿದ ಸದಸ್ಯರಿಗೆ ಸಂತಾಪ‌ ಕೋರಿ ಮೌನಾಚರಣೆ ಮಾಡಲಾಯಿತು.
ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ‌ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಎನ್, ಉಪಾಧ್ಯಕ್ಷರಾಗಿ ರುಕ್ಮಾಂಗದ ಎಸ್.ಆರ್, ಕಾರ್ಯದರ್ಶಿಯಾಗಿ
ವಿಜೇತ ವಿ ಕಾಮತ್, ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಹ್ಯಾರಿಮೊರಸ್, ಜನಾರ್ಧನ, ನೀರಜ್,
ವಾಣಿ ಮತ್ತು ನಸೀಮಾ ಅವರನ್ನು ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿರ್ದೇಶಕರುಗಳಾದ ರೇಣುಕಾ ಸ್ವಾಮಿ, ಚಂದ್ರಶೇಖರ್, ಪ್ರಭು, ಸತೀಶ್ ,ಲೋಕೇಶ್ ಬಿ.ಬಿ, ಲೋಕೇಶ್ ಎನ್, ಮಂಜುನಾಥ್, ರಮೇಶ್, ಪ್ರವೀಣ್ ಧರ್ಮಾನಂದ, ಸುಬ್ರಮಣಿ ಸಭೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ಜವರಯ್ಯ ಪ್ರಾರ್ಥಿಸಿದರು, ನಿರ್ದೇಶಕ ಪರಮೇಶ್ ಸ್ವಾಗತಿಸಿದರು, ಲೋಕೇಶ್ ಎನ್ ನಿರೂಪಿಸಿದರು, ರುಕ್ಮಾಂಗದ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!