ಕಾರ್ಯಕ್ರಮ

ಕುಶಾಲನಗರದಲ್ಲಿ ಕೂರ್ಗ್ TV6 ವಾಹಿನಿ ಶುಭಾರಂಭ

ಕುಶಾಲನಗರ, ಡಿ 29: ಕುಶಾಲನಗರದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ಕೂರ್ಗ್ TV6 ದೃಶ್ಯವಾಹಿನಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪಿರಿಯಾಪಟ್ಟಣ ಕ್ಷೇತ್ರದ ಮಾಜಿ ಶಾಸಕ ಕೆ.ಮಹದೇವ್ ನೂತನ ವಾಹಿನಿಗೆ ಚಾಲನೆ ನೀಡಿದರು. ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಭಾಗಿಯಾಗಿ ನೂತನ ವಾಹಿನಿಗೆ ಶುಭ ಕೋರಿದರು.

ಎನ್.ಮೋಹನ ಕುಮಾರ್ ನೇತೃತ್ವದ ವಾಹಿನಿಯ ನಿರ್ದೇಶಕರುಗಳು, ನಗರದ ಗಣ್ಯರಾದ ವಿ.ಪಿ.ಶಶಿಧರ್, ಮಂಜುನಾಥ್ ಗುಂಡುರಾವ್, ನಾಗೇಂದ್ರಬಾಬು, ವಿ.ಎನ್.ವಸಂತಕುಮಾರ್, ಜೋಸೆಫ್ ವಿಕ್ಟರ್ ಸೋನ್ಸ್, ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!