ಕುಶಾಲನಗರ, ಡಿ 23: ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಂಭಾಗ ಸೋಮವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಕರುವೊಂದು ಗಂಭೀರವಾಗಿ ಗಾಯಗೊಂಡಿತ್ತು. ಬೆಳಗ್ಗೆ ಕರುವನ್ನು ಗಮನಿಸಿದ ಸ್ಥಳೀಯರು, ಕೊಡಗು ಅಭಿವೃದ್ಧಿ ಸಮಿತಿಯ ದಾವುದ್ ಮತ್ತಿತರರ ಪ್ರಮುಖರು ಪೌರ ಕಾರ್ಮಿಕರೊಡಗೂಡಿ ಸ್ವಂತ ವಾಹನದಲ್ಲಿ ಪಶು ವೈದ್ಯಕೀಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಇಂತಹ ಪ್ರಕರಣ ಸಂದರ್ಭ ಮೂಕಪ್ರಾಣಿಗಳ ಚಿಕಿತ್ಸೆಗೆ ಪಶು ವೈದ್ಯರ ಸಹಕಾರ ಅತಿ ಮುಖ್ಯ. ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಜೀವ ಉಳಿಸಬಹುದು. ಇದಕ್ಕೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಕೊಡಗು ಅಭಿವೃದ್ಧಿ ಸಮಿತಿ ಶಾಸಕರನ್ನು ಆಗ್ರಹಿಸಿದೆ.
Back to top button
error: Content is protected !!