ಕುಶಾಲನಗರ, ಡಿ 10: ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಶ್ರೀ ಕರಿಯ, ಶ್ರೀಮತಿ ಗೌರಿ, 70 ವರ್ಷ ಮೇಲ್ಪಟು, ಶ್ರೀಮತಿ ನಾಗಿ, 30 ವರ್ಷ, ಮತ್ತು ಕು| ಕಾವೇರಿ, 7 ವರ್ಷ ಹಾಗೂ ಗಿರೀಶ್, 38 ವರ್ಷ ಎಂಬುವವರು ಒಂಟಿ ಮನೆಯಲ್ಲಿ ವಾಸವಿದ್ದು, ಆರೋಪಿ ಗಿರೀಶ್ ಎಂಬಾತನು ನಾಗಿಯ ಮೂರನೇ ಗಂಡನಾಗಿದ್ದು ಒಂದು ವರ್ಷದಿಂದ ಒಟ್ಟಿಗೆ ವಾಸವಿರುತ್ತಾರೆ. ನಾಗಿಯ ಎರಡನೇ ಗಂಡನಾದ ಸುಬ್ರಮಣಿಯೊಂದಿಗೆ ಮತ್ತೆ ಸಂಬಂಧವಿರುವ ಬಗ್ಗೆ ಸಂಶಯದಿಂದ ಆರೋಪಿ ಗಿರೀಶನು ದಿ: 27-03-2025 ರಂದು ರಾತ್ರಿ ಸಮಯದಲ್ಲಿ ಶ್ರೀ ಕರಿಯ (ಶ್ರೀಮತಿ ನಾಗಿಯ ಅಜ್ಜ), ಶ್ರೀಮತಿ ಗೌರಿ (ಶ್ರೀಮತಿ ನಾಗಿಯ ಅಜ್ಜಿ), 70 ವರ್ಷ ಮೇಲ್ಪಟು, ಶ್ರೀಮತಿ ನಾಗಿ, 30 ವರ್ಷ, ಮತ್ತು ಕು| ಕಾವೇರಿ, 7 ವರ್ಷ (ಗಿರೀಶನ ಮಲ ಮಗಳು) ನಾಲ್ಕು ಜನರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಕಲಂ: 103(1) ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿ ಗಿರೀಶ್, 38 ವರ್ಷ ಎಂಬಾತನನ್ನು ದಿನಾಂಕ: 28-03-2025 ರಂದು ದಸ್ತಗಿರಿ ಮಾಡಿ ‘ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸದರಿ ಪ್ರಕರಣದ ತನಿಖಾಧಿಕಾರಿಯಾದ ಶ್ರೀ ಶಿವರಾಜ್ ಆರ್ ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ ಮತ್ತು ತನಿಖಾ ಸಹಾಯಕರಾದ ಶ್ರೀ ಅಬ್ದುಲ್ ಮಜೀದ್.ಕೆ.ಎ, ಹೆಚ್ ಸಿ & ಶ್ರೀಮತಿ ಹೇಮಲಲತಾ ರೈ. ಹೆಚ್ಸಿ, ಗೋಣಿಕೊಪ್ಪ ವೃತ್ತ ಕಛೇರಿ ಸಿಬ್ಬಂದಿಯವರು ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡು ಆರೋಪಿ ಗಿರೀಶ್ ವಿರುದ್ಧ ದೋಷಾರೋಪಣ ಪತ್ರವನ್ನು ದಿ: 12-06-2025 ರಂದು ಘನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿರಾಜಪೇಟೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ದಿನಾಂಕ: 10-12-2025 ರಂದು ಸದರಿ ಪ್ರಕರಣದ ಆರೋಪಿಯಾದ ಗಿರೀಶ್, 38 ವರ್ಷ ಈತನಿಗೆ ಕೊಲೆ ಮಾಡಿರುವ ಅಪರಾಧಕ್ಕಾಗಿ ಗಲ್ಲು ಶಿಕ್ಷೆಯನ್ನು ವಿಧಿಸಿ ಘನ ನ್ಯಾಯಾಲಯದ ಗೌರವನ್ವಿತ ನ್ಯಾಯಾಧೀಶರಾದ ಶ್ರೀ ನಟರಾಜ.ಎಸ್ ರವರು ತೀರ್ಪು ನೀಡಿರುತ್ತಾರೆ.
Back to top button
error: Content is protected !!