ಸುದ್ದಿಗೋಷ್ಠಿ

ನಾಳೆ ಮಂಗಳವಾರ ಕುಶಾಲನಗರದಲ್ಲಿ ಅದ್ದೂರಿ ಹನುಮ‌ಜಯಂತಿ: ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಲು ಶಾಸಕರ ಮನವಿ

ಕುಶಾಲನಗರ, ಡಿ 01: ನಾಳೆ ಮಂಗಳವಾರ ಕುಶಾಲನಗರದಲ್ಲಿ ಅದ್ದೂರಿ ಹನುಮ‌ಜಯಂತಿ ನಡೆಯಲಿದ್ದು, 10 ಮಂಟಪಗಳು ಪ್ರದರ್ಶನ ನೀಡಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು, ಪ್ರೇಕ್ಷಕರು ಶಾಂತಿಯುತವಾಗಿ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಬೇಕಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.

ಕುಶಾಲನಗರ ಪುರಸಭೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ಅದ್ದೂರಿಯಾಗಿ ಕಾರ್ಯಕ್ರಮ‌ ಜರುಗಲಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು,‌ ಕಾರ್ಯಕ್ರಮ ಯಶಸ್ವಿಯಾಗಲು ಈಗಾಗಲೇ ಹಲವು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಿನ‌ ಕ್ರಮವಹಿಸಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನಾಳೆ ಸಂಜೆ ನಿಗದಿತ ಅವಧಿಯಲ್ಲಿ ಆಯಾ ಮಂಟಪಗಳಿಗೆ ನೀಡಿದ‌ ಸಮಯದಲ್ಲಿ ಸರಿಯಾಗಿ ಪ್ರದರ್ಶನ ನೀಡಲು‌ ಸಮಿತಿಯವರು ಕ್ರಮವಹಿಸಬೇಕಿದೆ. ಹೆದ್ದಾರಿಯಲ್ಲಿ ವಾಹನ ದಟ್ಟಣೆ, ಅವ್ಯವಸ್ಥೆ ಉಂಟಾಗದಂತೆ ಸಮಿತಿಯವರು ಸೇರಿದಂತೆ ಸಾರ್ವಜನಿಕರು ಸಹಕಾರ ನೀಡಬೇಕಿದೆ. ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಹೋಟೆಲ್ ಗಳು ತೆರೆಯಲು, ಹೆಚ್ಚಿನ ಸಂಖ್ಯೆಯಲ್ಲಿ ಫುಡ್ ಕೋರ್ಟ್ ತೆರೆಯಲು ಕ್ರಮವಹಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಾಸಕರು ಕೋರಿದರು.

ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಹನುಮ ಜಯಂತಿ ಅದ್ದೂರಿ ಪರಂಪರೆ, ವೈಭವ ನಿರಂತರವಾಗಿ ಮುಂದುವರೆಯಬೇಕಿದೆ. ಊರ ಹಬ್ಬವಾಗಿ ಸೌಹಾರ್ದದ ಸಂಕೇತವಾದ ಹನುಮ ಜಯಂತಿ ಆಚರಣೆಗೆ ಈಗಾಗಲೆ ಶಾಸಕರು ಹಲವು ಪೂರ್ವ ಭಾವಿ ಸಭೆ ನಡೆಸಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಸಮಿತಿ ಪದಾಧಿಕಾರಿಗಳಾದ ದೇವರಾಜ್, ಗಿರೀಶ್, ನಾಗೇಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!