ಕುಶಾಲನಗರ, ನ 19: ಕುಶಾಲನಗರದ ಎನ್ ಟಿ ಸಿ ಪ್ರಾಪರ್ಟಿಗೆ ಗೆ ನುಗ್ಗಿ ನೈತಿಕ ಪೊಲೀಸ್ ಗಿರಿ ಮಾಡಲಾಗಿದೆ ಎಂದು ಆರೋಪಿಸಿ ಎನ್ ಟಿ ಸಿ & ಆರ್ ಎ ವಸನ ಪ್ರೈವೆಟ್ ಲಿಮಿಟೆಡ್ ವರ್ತಕರು ಹಾಗೂ ಹೊಟೇಲ್ ಗ್ಯಾಲಕ್ಸಿ, ಹೊಟೇಲ್ ಮ್ಯಾಗ್ನಿಫಿಕ್, ಹೊಟೇಲ್ ಅರ್ಮಾನ್, ಹೊಟೇಲ್ ಫುಡ್ ಕೋರ್ಟ್, ಕೂರ್ಗ್ ವಾಟರ್ ಪಾರ್ಕ್ ಪ್ರಮುಖರು ಕೊಡಗು ಅಭಿವೃದ್ಧಿ ಸಮಿತಿ ಪದಾಧಿಕಾರಿ ವಿರುದ್ದ ಡಿವೈಎಸ್ಪಿ ಗೆ ದೂರು ನೀಡಿದ್ದಾರೆ. ಈ ಬಗ್ಗೆ ಸಭೆ ನಡೆಸಿದ ವರ್ತಕರು ಘಟನೆ ಖಂಡಿಸಿ ಪೊಲೀಸರಿಗೆ ದೂರು ಸಲ್ಲಿಸಿದರು.
ದಿನಾಂಕ 16-11-2025 ರಂದು ಕೊಡಗು ಅಭಿವೃದ್ಧಿ ಸಮಿತಿ, ಕುಶಾಲನಗರ ಘಟಕದ ದಾವೂದ್ ಮತ್ತು ಅವರ ಸಂಗಡಿಗರು ಎನ್ ಟಿ ಸಿಯ ಟೂರಿಸಂ ಸೆಂಟರ್ ನ ಪಾರ್ಕಿಂಗ್ ನಲ್ಲಿ ನಿಂತಿದಂತಹ ಬಸ್ಗಳ ಚಾಲಕರನ್ನು ಅಡ್ಡಗಟ್ಟಿ ನಿಮ್ಮ ವಾಹನದ ಮತ್ತು ತೆರಿಗೆ ಕಟ್ಟಿರುವ ದಾಖಾಲಾತಿಗಳನ್ನು ತೋರಿಸಬೇಕೆಂದು ಅವರೇ ಸೃಷ್ಟಿಸಿರುವ ವೀಡಿಯೋ ವೈರಲ್ ಆಗಿರುವುದು ತಮಗೆಲ್ಲ ತಿಳಿದಿರುವ ವಿಚಾರ, ಇದರಿಂದಾಗಿ ಇಲ್ಲಿ ಪ್ರತಿನಿತ್ಯ ಬರುವಂತಹ ನೂರಾರು ವಾಹನಗಳಿಗೆ ಮತ್ತು ಸಾವಿರಾರು ಪ್ರವಾಸಿಗರಿಗೆ ತೊಂದರೆಯಾಗುವುದು ಅಕ್ಷರಸಹ ಸತ್ಯ. ಆದ್ದರಿಂದ ಈ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಪ್ರವಾಸಿಗರಿಗೆ ಹಾಗೂ ಪ್ರವಾಸಿ ವಾಹನಗಳಿಗೆ ಸೂಕ್ತ ಭದ್ರತೆ ಒದಗಿಸಿಕೊಡಬೇಕೆಂದು ದೂರಿನಲ್ಲಿ ಕೋರಲಾಗಿದೆ.
Back to top button
error: Content is protected !!