ಆತ್ಮಹತ್ಯೆ

ಶಾಲಾ ಬಾಲಕಿ ಗರ್ಭಿಣಿ: ಹೆದರಿದ ಯುವಕ ನಾಲೆಗೆ ಹಾರಿ ಆತ್ಮಹತ್ಯೆ

ಪಿರಿಯಾಪಟ್ಟಣ, ನ 03:: ಶಾಲಾ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಆರೋಪದಿಂದ ಹೆದರಿ 27 ವರ್ಷದ ಯುವಕ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಕುಡಕೂರು ಗ್ರಾಮದ ರಾಮು ಆತ್ಮಹತ್ಯೆಗೂ ಮುನ್ನ ಯುವಕ ವಾಯ್ಸ್ ನೋಟ್ ಮಾಡಿದ್ದಾನೆ.ವಿದ್ಯಾರ್ಥಿನಿ ಗರ್ಭಿಣಿ ಆಗಿರುವುದಕ್ಕೆ ನಾನು ಕಾರಣನಲ್ಲ, ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ನನಗೆ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾನೆ.

ವೈದ್ಯರು ಬಂದು ಬಾಲಕಿಯ ಆರೋಗ್ಯ ತಪಾಸಣೆ ಮಾಡಿದ್ದರು. ಆಗ ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಶಾಲೆಗೆ ಕಳಂಕ ಬರುತ್ತದೆ ಎಂದು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಹುಡುಗಿ ಮಾತನಾಡಿಸಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ/ ಶಾಲೆಯ ಪಿ.ಟಿ. ಟೀಚರ್ ಇದಕ್ಕೆಲ್ಲ ಕಾರಣ. ಅವರು ಹೀಗೆ ಮಾಡಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಾಯ್ಸ್ ನೋಟ್ ನಲ್ಲಿ ತಿಳಿಸಿದ್ದಾನೆ.

ಅಕ್ಟೋಬರ್ 31 ರಂದು ವಾಯ್ಸ್ ನೋಟ್ ಹಾಕಿ ಯುವಕ ನಾಪತ್ತೆಯಾಗಿದ್ದ. ಇದೀಗ ಬೆಟ್ಟದ ತುಂಗಾ ನಾಲೆಯಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಬೆಟ್ಟದ ತುಂಗಾ ಗ್ರಾಮದ ನಾಲೆಯ ಬಳಿ ಬೈಕ್, ಚಪ್ಪಲಿ, ಮೊಬೈಲ್, ಜರ್ಕಿನ್ ಬಿಟ್ಟು ನಾಲೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡಿಎನ್‌ಎ ಟೆಸ್ಟ್ ಮೂಲಕ ತಪ್ಪಿರಸ್ಥರ ಪತ್ತೆ ಹಚ್ಚಲು ಒತ್ತಾಯಿಸಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!