ಧಾರ್ಮಿಕ

ಹಿಲಾಲ್ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

ಕುಶಾಲನಗರ,ಮಾ೨೦: ಮುಸಲ್ಮಾನರ ಪವಿತ್ರ ಧರ್ಮಗಳಲ್ಲಿ ಒಂದಾದ ಈದುಲ್ ಫಿತರ್ ಹಬ್ಬವನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಆಚರಿಸಲಾಯಿತು.
ನಿರಂತರ ೨೯ ದಿನಗಳ ವ್ರತಾಚರಣೆಯ ನಂತರ ಶಾಫಿ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಆಚರಿಸಿದರು. ಹಬ್ಬದ ದಿನದಂದು ಬೆಳಿಗ್ಗೆ ವಿಶೇಷವಾದ ಪ್ರಾರ್ಥನೆ ನೆರವೇರಿಸಲಾಯಿತು.
ಶಾಂತಿ, ಸೌಹಾರ್ದತೆ, ಕರುಣೆ, ಸಹನೆ ಬಗ್ಗೆ ಧರ್ಮಗುರುಗಳಾದ ಶಾಫಿ ಫೈಜ಼ಿ ಇರ್ಪಾನಿಯವರು ಪ್ರಭಾಷಣ ನೀಡಿದರು. ಜೊತೆಗೆ ಈದುಲ್ ಫಿತರ್ ನ ಪ್ರಾಮುಖ್ಯತೆ ಬಗ್ಗೆ, ಪ್ರತಿಯೊಬ್ಬರೂ ಖಡ್ಡಾಯವಾಗಿ ನೀಡಬೇಕಾದ ದಾನದ ಬಗ್ಗೆ ಅವರು ಭೋದನೆ ನೀಡಿದರು.
ನಮಾಜ಼್ ನ ನಂತರ ಪರಸ್ಪರ ಈದ್ ನ‌ ಶುಭಾಶಯ ಹಂಚಿಕೊಂಡಿದರು.
ಈ ಸಂದರ್ಭ ಮಾತನಾಡಿದ ಹಿಲಾಲ್ ಮಸೀದಿ ಅಧ್ಯಕ್ಷರಾದ ರಫೀಕ್ ಹಾಗೂ ಕಾರ್ಯದರ್ಶಿ ಕರೀಂ, ಹಸಿದವನ ನೋವನ್ನು ಅರಿಯುವ ಉದ್ದೇಶದಿಂದ ನಾವು ಮೂವತ್ತು ದಿನಗಳ‌ ಕಾಲ ವ್ರತಾಚರಣೆ ಮಾಡುತ್ತೇವೆ‌. ಎಲ್ಲರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳು ಎಂದರು.
ಈ ಸಂದರ್ಭ ಹಿಲಾಲ್ ಮಸೀದಿ ಕಮಿಟಿ ಪ್ರಮುಖರು, ಸದಸ್ಯರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಸದಸ್ಯರು ಇದ್ದರು.
ಕೂಡಿಗೆ, ನಂಜರಾಯಪಟ್ಟಣ, ಹೊಸಕೋಟೆ, ಶುಂಠಿಕೊಪ್ಪ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಗುರುವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನಲೆ ಶಾಫಿ ಬಾಂಧವರಿಂದ ಶುಕ್ರವಾರ ಹಬ್ಬವನ್ನು ಆಚರಿಸಲಾಯಿತು. ಶನಿವಾರದಂದು ಹನಫಿ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಆಚರಿಸಲಿದ್ದಾರೆ. ಕುಶಾಲನಗರದ ಗಂಧಕೋಟೆಯ ಈದ್ಗಾ ಮೈದಾನದಲ್ಲಿ ಈದುಲ್ ಫಿತರ್ ಹಬ್ಬದ ವಿಶೇಷ ಪ್ರಾರ್ಥನೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!