ಸಾಂಸ್ಕೃತಿಕ

ರಂಗ ಭಾರತಿ ಕಲಾಮಂದಿರಮ್ ನ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಕುಶಾಲನಗರ, ನ 02: ಕುಶಾಲನಗರದ
ರಂಗ ಭಾರತಿ ಕಲಾಮಂದಿರಮ್ ನ ಮೊದಲನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ರಂಗೋತ್ಸವ-2025 ಕುಶಾಲನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೈಲಾಶ್ ಕಮಾಡಿಟಿಸ್ ಮಾಲೀಕ ಸುದೀಪ್ ಚಾಲನೆ ನೀಡಿದರು. ರಂಗಭಾರತಿ ವಿದ್ಯಾರ್ಥಿಗಳಿಂದ ಆಕರ್ಷಕ ಭರತನಾಟ್ಯ, ಸಂಗೀತ, ಕೀ ಬೋರ್ಡ್, ತಬಲಾ, ಸ್ಯಾಕ್ಸೋಫೋನ್ ವಾದನ ಗಮನ ಸೆಳೆಯಿತು.
ಅತಿಥಿಗಳಾಗಿ ಉದ್ಯಮಿ ಎಸ್.ಕೆ.ಸತೀಶ್ ಪಾಲ್ಗೊಂಡಿದ್ದರು.
ಕಲಾಮಂದಿರಂನ
ಅಧ್ಯಕ್ಷ ಬಿ.ಆರ್. ಜನಾರ್ಧನ್,
ಕಾರ್ಯದರ್ಶಿ ಬಿ.ಅಮೃತ್ ರಾಜ್,
ಉಪಾಧ್ಯಕ್ಷೆ ನವ್ಯ,
ಟ್ರಸ್ಟಿ ಮಹೇಶ್ ಅಮೀನ್ ಮತ್ತು ದೀಪ ಸುರೇಂದ್ರ, ಪೋಷಕರಾದ ಉಮಾಶಂಕರ್, ಹಿರಿಯ ವಕೀಲ ಆರ್.ಕೆ ನಾಗೇಂದ್ರ ಬಾಬು ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!