ದೇವಾಲಯ

ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಿಧಿ ಕುಂಭ ಸ್ಥಾಪನೆ ಪೂಜೋತ್ಸವ

ಕುಶಾಲನಗರ, ಅ 16: ಕುಶಾಲನಗರದಲ್ಲಿ ಜೀರ್ಣೋದ್ದಾರಗೊಳ್ಳುತ್ತಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಿಧಿಕುಂಭ ಸ್ಥಾಪನೆ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.

ಧಾರ್ಮಿಕ ವಿಧಿವಿಧಾನಗಳು, ಹೋಮ ಹವನದ ನಂತರ ಷಡೋದ್ದರ ನೆರವೇರಿಸಿದ ಬಳಿಕ ನಿಧಿಕುಂಭ ಸ್ಥಾಪಿಸಲಾಯಿತು. ಕಲ್ಲಿನಿಂದ ಬಿಂದಿಗೆ ಮಾದರಿ ರಚಿಸಿ ಅದರೊಳಗೆ ಚಿನ್ನ ಬೆಳ್ಳಿ, ವಜ್ರ, ಮುತ್ತು ರತ್ನಗಳನ್ನಿರಿಸಿ ನಿಧಿ ಕುಂಭ ಸ್ಥಾಪಿಸಲಾಯಿತು. ಶಾಸಕ ಡಾ.ಮಂತರ್ ಗೌಡ ಪೂಜೋತ್ಸವದಲ್ಲಿ ಭಾಗಿಯಾಗಿ ನಿಧಿಕುಂಭ ಸ್ಥಾಪನೆ ಕಾರ್ಯದಲ್ಲಿ ತೊಡಗಿಸಿಕೊಂಡರು. ಜೀರ್ಣೋದ್ಧಾರ ಬಳಿಕ ನಿಧಿಕುಂಭ ಸ್ಥಾಪನೆ ಸ್ಥಳದಲ್ಲಿ ಗರ್ಭಗುಡಿ ನಿರ್ಮಾಣಗೊಳ್ಳಲಿದೆ‌.
ಗಿರೀಶ್ ಭಟ್ ನೇತೃತ್ವದಲ್ಲಿ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್ ಪೂಜಾ ವಿಧಿ ನೆರವೇರಿಸಿದರು.
ಇದೇ ಸಂದರ್ಭ ದಾನಿಗಳಾದ ಡಿ.ಎಸ್.ಜಗದೀಶ್ ದಂಪತಿಗಳನ್ನು ಶಾಸಕರು ಗೌರವಿಸಿದರು.
ಇದೇ ಸಂದರ್ಭ ದೇವಾಲಯ ಟ್ರಸ್ಟ್ ವತಿಯಿಂದ ಶಾಸಕ ಡಾ.ಮಂತರ್ ಗೌಡ, ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಗಣಪತಿ, ಕಾರ್ಯದರ್ಶಿ ಮಹೇಶ್, ಜೀರ್ಣೋದ್ಧಾರ ಸಮಿತಿ ಸಂಚಾಲಕ ವಿ.ಎಸ್.ಆನಂದಕುಮಾರ್, ಟ್ರಸ್ಟಿಗಳಾದ ಹೆಚ್.ಟಿ.ವಸಂತ, ಗಿರೀಶ್, ಚಂದ್ರು, ವಿಮಲ್, ಶ್ರೀನಿವಾಸ ರಾವ್ ಸೇರಿದಂತೆ ಭಕ್ತರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!