ಕುಶಾಲನಗರ, ಅ 13: ಹನುಮ ಜಯಂತಿ ಕಾರ್ಯಕ್ರಮಕ್ಕೆ ಹಾರಂಗಿ ಭಾಗದಿಂದ ಟೀಮ್ ವೀರ ಹನುಮ ಸೇವಾ ಸಮಿತಿ ವತಿಯಿಂದ ಎರಡನೇ ವರ್ಷದ ಹನುಮ ಜಯಂತೋತ್ಸವ ಪೂರ್ವಭಾವಿ ಸಭೆಯನ್ನು ಚಿಕ್ಕತ್ತೂರು ಗ್ರಾಮದ ಸಮುದಾಯ ಭವನದಲ್ಲಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯಲ್ಲಿ ಅತ್ತೂರು, ಯಡವನಾಡು, ಹುದುಗೂರು, ಹಾರಂಗಿ, ದೊಡ್ಡತ್ತೂರು, ಚಿಕ್ಕತ್ತೂರು,ಸುಂದರನಗರ ಒಳಗೊಂಡಂತೆ ಏಳು ಗ್ರಾಮಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭ ಮುಂದಿನ ಡಿಸೆಂಬರ್ 2 ತಾರೀಖಿನ ಹನುಮ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು. ಕಳೆದ ಬಾರಿಗಿಂತ ಈ ವರ್ಷ ಇನ್ನಷ್ಟು ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಯಿತು. ಚಿಕ್ಕತ್ತೂರು ಸಮಿತಿ ವತಿಯಿಂದ ವಿಭಿನ್ನ ಮಾದರಿಯ ಒಂದು ಕೆಲಸಕ್ಕೆ ಎಲ್ಲಾ ಗ್ರಾಮಗಳ ಒಪ್ಪಿಗೆಯೊಂದಿಗೆ ತೀರ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಹಂತಂತವಾಗಿ ಸಭೆಯನ್ನು ಕರೆದು ಇನ್ನಷ್ಟು ವಿಚಾರಗಳನ್ನು ಚರ್ಚಿಸೋಣ ಎಂದು ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭ ಸಂಘಟನಾ ಕಾರ್ಯದರ್ಶಿ ಸ್ವಾಮಿ, ಕಾರ್ಯದರ್ಶಿ ಚೇತನ್ ಮತ್ತು ಉಪಾಧ್ಯಕ್ಷರುಗಳಾದ ಮಲ್ಲಪ್ಪ, ಸಜನ್ ಕಿಶೋರ್, ರಾಮೇಗೌಡ, ರಂಗಸ್ವಾಮಿ ಎಲ್ಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Back to top button
error: Content is protected !!