ಕುಶಾಲನಗರ, ಅ 14: ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮಹೂರ್ತ ಹಬ್ಬದ ಒತ್ತೊರ್ಮೆಕೂಟವು ಕುಶಾಲನಗರ ಕೇರಳ ಸಮಾಜ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಚಳಿಯಂಡ ಯಶ್ವಂತ್ ಅಚ್ಚಯ್ಯ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು.
ಮುಂಬರುವ ವರ್ಷಗಳಲ್ಲಿ ಸಮಾಜಕ್ಕೆ ನಿವೇಶನ ಖರೀದಿಸಿ ಅ ನಿವೇಶನದಲ್ಲಿ ಸುಸಜ್ಜಿತ ಸಮುದಾಯ ಭವನವನ್ನು ನಿರ್ಮಿಸಲು ಸಭೆಯಲ್ಲಿ ಸಲಹೆಗಳು ಕೇಳಿಬಂದವು. ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜನಾಂಗಭಾಂದವನ್ನು ಗುರುತಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಡಿಕೇರಿ ಪ್ರಾದೇಶಿಕ ಸಾರಿಗೆ ನಿಗಮದ ಬ್ರೇಕ್ ಇನ್ಸ್ಪೆಕ್ಟರ್ ಪೊಕ್ಕಳಿಚಂಡ ಮೋಹನ್ ಕುಮಾರ್, ಕುಶಾಲನಗರ ಜೆ. ಸಿ. ಐ ಅಧ್ಯಕ್ಷೆ ತಂಬಂಡ ತೇಜ ದಿನೇಶ್ ಪಾಲ್ಗೊಂಡಿದ್ದರು. ಸಂಘದ ಉಪಾಧ್ಯಕ್ಷ ಚಂಗಚಂಡ ಸುಬ್ರಮಣಿ, ಕಾರ್ಯದರ್ಶಿ ಪಂದಿಕಂಡ ವಿಠ್ಠಲ, ಮಂಡೇಡ ದೀಪಕ್, ಖಚಾಂಚಿ ಕೊಂಗೆಪ್ಪಂಡ ನಂಜಪ್ಪ, ನಿರ್ದೆಶಕರುಗಳಾದ ಪುದಿಯತಂಡ ಬೆಳ್ಳಿಯಪ್ಪ, ಪುದಿಯತಂಡ ಗಾಂಧಿ, ಕಾಟಿಕುಟ್ಟೀರ ಮೊಣ್ಣಪ್ಪ, ಮೇಲತಂಡ ಮಂಜುಳ, ಪೊಕ್ಕಳಿಚಂಡ ಲಲಿತ ಚಂಗಚಂಡ ನಂಜಪ್ಪ, ಮಂಡೇಯಂಡ ಪಳಂಗಪ್ಪ, ಪ್ರಮುಖರಾದ ಕೊಂಗೆಪ್ಪಂಡ ಶಶಿ ಬೀಮಯ್ಯ,ಪಡಿಞರಂಡ ಪ್ರಭು ಕುಮಾರ್, ಕೊಪ್ಪಡ ಪಳಂಗಪ್ಪ, ಪಾನಿಕುಟ್ಟೀರ ಕುಟ್ಟಪ್ಪ, ಕೊಕ್ಕೇರ ಜನನಾಥ್, ತಂಬಂಡ ಮಂಜುನಾಥ್, ಕೊಂಗೆಪ್ಪಂಡ ರವಿ, ಚಳಿಯಂಡ ಕಮಲ, ಪಂದಿಕಂಡ ಈಶ್ವರ್ ಚಳಿಯಂಡ ಅಚ್ಚಯ್ಯ ಮುಂತಾದವರು ಹಾಜರಿದ್ದರು.
14 ಕೆಯುಎಸ್ 01 ಚಿತ್ರದಲ್ಲಿಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮಹೂರ್ತ ಹಬ್ಬದ ಒತ್ತೊರ್ಮೆಕೂಟವು ಕುಶಾಲನಗರ ಕೇರಳ ಸಮಾಜ ಕಟ್ಟಡದಲ್ಲಿ ನಡೆಯಿತು.
Back to top button
error: Content is protected !!