ಅಪಘಾತ

ಮಡಿಕೇರಿಯಲ್ಲಿ ಅಗ್ನಿ ದುರಂತ: ಶಾಲಾ ಬಾಲಕ ದುರ್ಮರಣ

ಕುಶಾಲನಗರ, ಅ 08: ಮಡಿಕೇರಿಯ ಕಾಟಗೇರಿ ಗುರುಕುಲ‌ ಮಾದರಿಯ ಹರ್ ಮಂದಿರ್ ವಸತಿ ಶಾಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ವಿದ್ಯಾರ್ಥಿ ಜೀವಂತ ದಹನವಾದ ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ.

ಚೆಟ್ಟಿಮಾನಿ ಗ್ರಾಮದ ನಿವಾಸಿ ಎರಡನೇ ತರಗತಿ ವಿದ್ಯಾರ್ಥಿ ಪುಷ್ಪಕ್ (7) ಮತ ದುರ್ದೈವಿ. ಉಚಿತ ಶಿಕ್ಷಣ ಪೂರೈಸುತ್ತಿದ್ದ ಶಾಲೆಯ ಮೇಲ್ಛಾವಣಿಗೆ ಆಕಸ್ಮಿಕ ಬೆಂಕಿ ತಗುಲಿ ಈ ದುರ್ಘಟನೆ ಸಂಭಿಸಿದೆ. ಉಳಿದ 25 ಕ್ಕೂ ಅಧಿಕ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪಾರಾಗಿದ್ದಾರೆ.

ಮಡಿಕೇರಿ ಅಗ್ನಿ ಶಾಮಕ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.ಗ್ರಾಮಾಂತರ ಪೊಲೀಸ್ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಫೈಯರ್ ಬ್ರಿಗೇಡ್ ಅಧಿಕಾರಿಯದ ನಾಗರಾಜ್ ಭೇಟಿ ಪರಿಶೀಲನೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!