ಕುಶಾಲನಗರ, ಸೆ. 15: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿ ಚಿಕ್ಕತ್ತೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಲು ಉತ್ಪಾದಕರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಿ. ಎಸ್ ಗಣೇಶ ನವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ ಹೇಮಂತ್ ಕುಮಾರ್ ಸಂಘದ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಸವಿಸ್ತಾರವಾಗಿ ಮಾತಾನಾಡಿದರು.
ವಿಸ್ತಾರಣಾಧಿಕಾರಿ ಬಿ. ಬಿ. ವೀಣಾ ಅಗಮಿಸಿ ಪಶುಪಾಲನೆ, ಮತ್ತು ಅವುಗಳ ಸಂರಕ್ಷಣೆ ಸೇರಿದಂತೆ ಸಂಘಕ್ಕೆ ಒಕ್ಕೂಟದ ವತಿಯಿಂದ ದೊರಕುವ ಚಿಕಿತ್ಸಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸವಿಸ್ತಾರವಾದ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಆರ್. ಕುಮಾರ ಸ್ವಾಮಿ, ನಿರ್ದೇಶಕರಾದ ರಾಮಣ್ಣ ರೈ,ಹೆಚ್. ಪುಟ್ಟೇಗೌಡ, ದೇವೇಗೌಡ, ಕೆ. ಗುಜೇಂದ್ರ, ಪುಟ್ಟಣ್ಣಯ್ಯ, ಅಶ್ವಿನಿ ಕುಮಾರ್, ಗೋವಿಂದ ಶೆಟ್ಟೆ,ಕೆ.ಹಚ್, ಪುಷ್ಪಲತಾ, ಸುಶೀಲಾ, ಲಕ್ಷಿ, ನಾಮ ನಿರ್ದೇಶಕ ಎಸ್. ಆರ್. ಪುರುಷೋತ್ತಮ, ಸಂಘದ ಕಾರ್ಯದರ್ಶಿ ಎನ್. ರಾಮೇಗೌಡ, ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.
Back to top button
error: Content is protected !!