ಕುಶಾಲನಗರ, ಆ 17: ಕುಶಾಲನಗರ ಜಾಮಿಯಾ ಮಸೀದಿ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಕಂಬ ಒಂದೆಡೆ ವಾಲಿಕೊಂಡಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಕಂಬದಿಂದ ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದವರು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರ್ಷಗಳಿಂದ ಇದೇ ದುಸ್ಥಿತಿಯಲ್ಲಿರುವ ಕಂಬ ತೆರವುಗೊಳಿಸಿ ಸಂಭಾವ್ಯ ಅಪಾಯ ತಪ್ಪಿಸುವಂತೆ ವರ್ತಕ ವೈಶಾಖ್ ಒತ್ತಾಯಿಸಿದ್ದಾರೆ.
Back to top button
error: Content is protected !!