ಕುಶಾಲನಗರ, ಆ.02 ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಹಾರಂಗಿ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆಸಲಾಗಿರುವ ಕಾಳು ಮೆಣಸು ಗಿಡಗಳನ್ನು ಆಗಸ್ಟ್ 8 ರಿಂದ ಪ್ರತಿ ರೈತರಿಗೆ ಗರಿಷ್ಠ 500. ಸಂಖ್ಯೆಯ ಕಡ್ಡಿಗಳನ್ನು ರಿಯಾಯಿತಿ ದರ. 5.50 ರೂ ನಂತೆ ವಿತರಣೆ ಮಾಡಲಾಗುವುದು ಎಂದು ಹಾರಂಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ವರದರಾಜ್ ತಿಳಿಸಿದ್ದಾರೆ.
ಆಸಕ್ತ ರೈತರು ರಿಯಾಯಿತಿ ಸೌಲಭ್ಯಗಳನ್ನು ಪಡೆಯಲು ತಮ್ಮ ಜಮೀನಿನ ಆರ್.ಟಿ.ಸಿ. ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡುವ ಮೂಲಕ ಕಾಳು ಮೆಣಸು ಕಡ್ಡಿಗಳನ್ನು ಪಡೆಯಬಹುದು ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Back to top button
error: Content is protected !!