ಆರೋಪ

ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಕೈಕೊಟ್ಟ ಏರ್ ಟೆಲ್, ಬಿಎಸ್ಎನ್ಎಲ್: ಆಕ್ರೋಷ

ಕುಶಾಲನಗರ, ಜು 30: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ, ಹೊಸಪಟ್ಟಣ, ವಿರುಪಾಕ್ಷಪುರ, ನಂಜರಾಯಪಟ್ಟಣ ಗ್ರಾಮಗಳಲ್ಲಿ ಏರ್ ಟೆಲ್, ಬಿಎಸ್ಎನ್ಎಲ್ ಬಳಕೆದಾರರಿಗೆ ನೆಟ್ವರ್ಕ್ ಸಮಸ್ಯೆ ತೀವ್ರ ಅನಾನುಕೂಲ ಸೃಷ್ಠಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಿಎಸ್ಎನ್ಎಲ್ , ಏರ್ ಟೆಲ್ ಸೇವೆ ಕಳೆದೊಂದು‌ ವರ್ಷಗಳಿಂದ ಮರೀಚಿಕೆಯಾಗಿದೆ. ಬಿಎಸ್ಎನ್ಎಲ್ ಬದಲಿಗೆ ಏರ್ ಟೆಲ್ ಗೆ ಬದಲಾದ ಗ್ರಾಹಕರಿಗೆ ಸಮಸ್ಯೆ ನಿವಾರಣೆಯಾಗಿಲ್ಲ. ಎರಡೂ ಸಂಸ್ಥೆ ಕೂಡ ಸೂಕ್ತ ರೀತಿಯಲ್ಲಿ ಸೇವೆ ಒದಗಿಸದೆ ಈ ಭಾಗದ ನಾಲ್ಕು ಗ್ರಾಮಗಳ ಸಾವಿರಾರು ಬಳಕೆದಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅರಣ್ಯ ವ್ಯಾಪ್ತಿ, ತೋಟಗಳಿಂದ ಆವೃತವಾಗಿರುವ ಗ್ರಾಮಗಳಲ್ಲಿ ಕಾಡಾನೆ, ಹುಲಿ ವನ್ಯಜೀವಿಗಳ ಉಪಟಳವಿದ್ದು ತುರ್ತು ಸಂದರ್ಭಗಳಲ್ಲಿ, ಸಕಾಲಕ್ಕೆ ಮೊಬೈಲ್ ಸಂಪರ್ಕ ದೊರೆಯುತ್ತಿಲ್ಲ ಎಂದು ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಮತ್ತಿತರರು ದೂರಿದ್ದಾರೆ. ಸಂಬಂಧಿಸಿದವರು ಇಲ್ಲದ ಸಬೂಬು ಹೇಳುವುದು ಬಿಟ್ಟರೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!