ಟ್ರೆಂಡಿಂಗ್

ಗಯಾನದಿಂದ ಗಿರೀಶ್ ಶವ ತರಲು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ತಂಡ ಹರಸಾಹಸ ಕುಶಾಲನಗರ

ಕುಶಾಲನಗರ :
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ವಿದ್ಯಾರ್ಥಿಯಾದ ದಿ. ಪಿ.ಬಿ. ಗಿರೀಶ್ ಅವರ ಪ್ರಾರ್ಥಿವವನ್ನು ವಿದೇಶದಿಂದ ತಾಯ್ನಾಡಿಗೆ ತರಲು ಸುಮಾರು 12 ಲಕ್ಷ ರೂಗಳು ಖರ್ಚಾಗಲಿದೆ.
ಇಷ್ಟು ದೊಡ್ಡ ಮೊತ್ತವನ್ನು ಭರಿಸುವಷ್ಟು ಗಿರೀಶನ ಕುಟುಂಬವು ಶಕ್ತರಾಗಿಲ್ಲದ ಕಾರಣ, ಮಂಗಳವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ತಂಡದ ಪದಾಧಿಕಾರಿಗಳು ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರಾದ *ಕೆ.ಎಸ್.ಪೊನ್ನಣ್ಣ* ಅವರನ್ನು ಭೇಟಿಮಾಡಿ ವಿನಂತಿಸಿದರು.
ಮನವಿಗೆ ಸ್ಪಂದಿಸಿದ ಪೊನ್ನಣ್ಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಸಮಾಲೋಚಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಶಾಸಕರ ನಿಧಿಯಿಂದ ಮೃತ ದೇಹವನ್ನು ತರಲು ಖರ್ಚಾಗುವ ಹಣವನ್ನು ಭರಿಸುವ ಭರವಸೆಯನ್ನು ನೀಡಿರುತ್ತಾರೆ ಎಂದು ಸಮ್ಮಿಲನ ತಂಡದಲ್ಲಿ ಮಹೇಶ್, ಪ್ರತಾಪ್, ಅಭಿಷೇಕ್, ಲೋಕೇಶ್ ಇದ್ದರು. ಈ ಸಂದರ್ಭ ಪೊನ್ನಣ್ಣ ಅವರ ಸಹೃದಯತೆಯನ್ನು ತಂಡ ಶ್ಲಾಘಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!