ಕುಶಾಲನಗರ, ಜು 08: ಕೂಡುಮಂಗಳೂರು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ರವರು ಪಂಚಾಯತಿ ವ್ಯಾಪ್ತಿಯ ಹಲವು ಅಭಿವೃದ್ಧಿಗಾಗಿ ಅನುದಾನ ಕೋರಿ ಮೈಸೂರು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಒಡೆಯರ್ ರವರ ಬಳಿ ಮನವಿ ಮಾಡಿದರು.
ಈ ಕುರಿತು ಮಾತನಾಡಿದ ಭಾಸ್ಕರ್ ನಾಯಕ್ ರವರು 24 ಪಂಚಾಯಿತಿ ಸದಸ್ಯರನ್ನು ಒಳಗೊಂಡ ಕೊಡಗಿನ ದೊಡ್ಡ ಗ್ರಾಮ ಪಂಚಾಯಿತಿ ನಮ್ಮ ಕೂಡುಮಂಗಳೂರು ಪಂಚಾಯತಿಯಾಗಿದ್ದು ಸುಮಾರು 10 ಸಾವಿರ ದಿಂದ 12 ಸಾವಿರ ಜನಸಂಖ್ಯೆ ಇದ್ದು ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಸಂಸದರಾದ ಯದುವೀರ್ ಒಡೆಯರ್ ರವರ ಬಳಿ ಮನವಿ ಮಾಡಲಾಗಿದೆ ಮತ್ತು ಪಂಚಾಯತಿ ವ್ಯಾಪ್ತಿಯ ಆನೆಕೆರೆ ಅಭಿವೃದ್ಧಿಗೂ ಕೂಡ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಇದಕ್ಕೆ ಪೂರಕವಾಗಿ ಸ್ಪಂದಿಸುವ ಭರವಸೆಯನ್ನು ಸಂಸದರು ನೀಡಿರುವುದಾಗಿ ತಿಳಿಸಿದರು
Back to top button
error: Content is protected !!