ಕುಶಾಲನಗರ ಜು 07: ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಅಣೆಕಟ್ಟೆ ನೆಲೆಯಲ್ಲಿ ತುಂಬಿರುವ ಹೂಳನ್ನಹ ತೆರವುಗೊಳಿಸುವಂತೆ ಅಣೆಕಟ್ಟೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.
ಹಲವು ವರ್ಷಗಳಿಂದ ನಾಲೆಯ ಹೂಳನ್ನು ತೆಗೆಯದ ಕಾರಣ ನೀರು ಸಮರ್ಪಕವಾಗಿ ಮುಂದೆ ಹರಿಯುತ್ತಿಲ್ಲ. ಇದರಿಂದ ಹಲವು ರೈತರ ಬೆಳೆಗೆ ಅಗತ್ಯ ನೀರು ದೊರೆಯದೆ ಅಣೆಕಟ್ಟೆ ಯೋಜನೆ ನಿಷ್ಪ್ರಯೋಕವಾದಂತಾಗಿದೆ ಎಂದು ನಂಜರಾಯಪಟ್ಟಣ ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಆರೋಪಿಸಿದ್ದಾರೆ.
ಕೇವಲ ಜಂಗಲ್ ಕಟ್ಟಿಂಗ್ ಗೆ ಮಾತ್ರ ಸೀಮಿತಗೊಳಿಸದೆ ಹೂಳು ತೆಗೆಯಲು ಕೂಡ ನೀರಾವರಿ ನಿಗಮ ಅನುದಾನ ಒದಗಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಅಣೆಕಟ್ಟೆ ಯೋಜನೆ ಸಾಕಾರವಾಗಬೇಕಾದಲ್ಲಿ ಎಲ್ಲರಿಗೂ ಸಮರ್ಪಕವಾಗಿ ನೀರು ಲಭಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೂಳು ತೆರವಿಗೆ ನಿಗಮ ಕ್ರಮವಹಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
Back to top button
error: Content is protected !!