ಕುಶಾಲನಗರ, ಜೂ 21: ಕುಶಾಲನಗರದ ಲಯನ್ಸ್ ಕ್ಲಬ್ ನ 2025-26ನೇ ಸಾಲಿನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಿತು. ಕ್ಲಬ್ ಅಧ್ಯಕ್ಷ ದೇವರಗುಂಡ ಪ್ರವೀಣ್ ಸೋಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಾಲಿನ
ಅಧ್ಯಕ್ಷರಾಗಿ ಎನ್.ಟಿ.ನಾರಾಯಣ, ಕಾರ್ಯದರ್ಶಿಯಾಗಿ ಎಂ.ಜಿ.ಕಿರಣ್, ಖಜಾಂಚಿಯಾಗಿ ಡಾ.ಶರತ್ ಕುಮಾರ್ ಮ್ಯಾಥ್ಯು ಅಧಿಕಾರ ವಹಿಸಿಕೊಂಡರು.
ಮಾಜಿ ಜಿಲ್ಲಾ ಗವರ್ನರ್ ಎಂ.ಬಿ. ಸದಾಶಿವ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸರಕಾರದ ಯೋಜನೆ ತಲುಪಲಾಗದ ಸ್ಥಳಗಳಿಗೆ, ಫಲಾನುಭವಿಗಳಿಗೆ ಲಯನ್ಸ್ ನೆರವಾಗುತ್ತದೆ. ಸೇವೆಯೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ಲಯನ್ಸ್ ಸಂಸ್ಥೆ ಬಡವರು, ಅಶಕ್ತರಪಾಲಿನ ಆಶಾಕಿರಣವಾಗಿದೆ, ಸೇವೆಯ ದೇವತೆಗಳಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಕ್ರಿಯ, ಸಮಾಜ ಸೇವೆಯ ಗುಣಗಳನ್ನು ಹೊಂದಿರುವವರು ಹೆಚ್ಚು ಸದಸ್ಯರಾಗಬೇಕಿದೆ ಎಂದು ಕರೆ ನೀಡಿದರು.
ಪ್ರಸಕ್ತ ಸಾಲಿನ ಕ್ಲಬ್ ಕಾರ್ಯದರ್ಶಿ ನಿತಿನ್ ಗುಪ್ತ, ಪ್ರಮುಖರಾದ ಸುಮನ್ ಬಾಲಚಂದ್ರ, ಕನ್ನಿಕಾ ಅಯ್ಯಪ್ಪ, ಗೀತಾ ರಾವ್, ಮಹದೇವಪ್ಪ, ಕನ್ನಂಡಬೊಳ್ಳಪ್ಪ, ಹರ್ಷ ಮತ್ತಿತರರು ಇದ್ದರು.
Back to top button
error: Content is protected !!