ಮನವಿ

ಕೂಡುಮಂಗಳೂರು ಪಂಚಾಯಿತಿ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಸರಿಪಡಿಸುವಂತೆ ಶಾಸಕರಿಗೆ ಅಧ್ಯಕ್ಷರಿಂದ ಮನವಿ

ಕುಶಾಲನಗರ, ಜೂ 25:ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್  ಹಾರಂಗಿ ಹುಲುಗುಂದ ಗ್ರಾಮದ ರಸ್ತೆ ಅಭಿವೃದ್ಧಿ ಬಗ್ಗೆ ಮತ್ತು ಸುಂದರನಗರ ಸ್ಮಶಾನ ಜಾಗಕ್ಕೆ ದಾಖಲೆ ಸೃಷ್ಟಿಸುವ ಬಗ್ಗೆ ಶಾಸಕರಾದ ಮಂತರ್ ಗೌಡ ಅವರಿಗೆ ಮನವಿ ಮಾಡಿದರು. ಈ ಕುರಿತು ಮಾತನಾಡಿದ ಭಾಸ್ಕರ್ ನಾಯಕ್ ರವರು ಹುಲುಗುಂದ ಗ್ರಾಮದಲ್ಲಿ ಸುಮಾರು ಅಂದಾಜು 300 ಕುಟುಂಬಗಳು ವಾಸವಿದ್ದು ಬಹುತೇಕ ಜನ ಪ.ಜಾತಿ ಮತ್ತು ಪ.ಪಂ ಕ್ಕೆ ಸೇರಿದವರಾಗಿದ್ದು ಈಗಾಗಲೇ ಇರುವ ರಸ್ತೆಯು ಕಚ್ಚಾ ರಸ್ತೆಯಾಗಿದ್ದು ಸಾರ್ವಜನಿಕರ ಮತ್ತು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಓಡಾಡಲು ತುಂಬಾ ತೊಂದರೆ ಆಗುತ್ತಿದೆ. ವಾಹನಗಳು ಸಂಚಾರ ಮಾಡಲು ತುಂಬಾ ಸಮಸ್ಯೆಗಳು ಅನುಭವಿಸುತ್ತಿದ್ದು ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೋರಲಾಗಿದೆ ಮತ್ತು ಸುಂದರನಗರ ಗ್ರಾಮದಲ್ಲಿ ಈ ಹಿಂದೆ KAIDB ಜಾಗದಲ್ಲಿ ಸುಮಾರು50 ವರ್ಷಗಳಿಂದ ಸ್ಮಶಾನವನ್ನು ಉಪಯೋಗಿಸಿಕೊಂಡು ಬರುತ್ತಿದ್ದರು ಆದರೆ KAIDB ಭೂಸ್ವಾಧೀನ ಸಂದರ್ಭದಲ್ಲಿ ಸದರಿ ಜಾಗವನ್ನು ಸೈಟ್ ಆಗಿ ಮಾರ್ಪಡಿಸಿ ಖಾಸಗಿಯವರಿಗೆ ನೀಡಲಾಗಿದ್ದು ಆದರೆ ಇತ್ತೀಚಿಗೆ KAIDB ಅವರು ಖಾಸಗಿಯವರಿಗೆ CA ಸೈಟನ್ನು ಬದಲಿ ನಿವೇಶನವಾಗಿ ನೀಡಿರುತ್ತಾರೆ ಆದ್ದರಿಂದ ಸದರಿ ಸ್ಮಶಾನಕ್ಕಾಗಿ ಉಪಯೋಗಿಸುತ್ತಿರುವ ಜಾಗವನ್ನು ಸಾರ್ವಜನಿಕ ಸ್ಮಶಾನ ಎಂದು ದಾಖಲೆಗಳನ್ನು ಸೃಷ್ಟಿಸಿ ಕೊಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಂತೋಷ್, ಸದಸ್ಯ ಶಂಶುದ್ದೀನ್ ಬಿಲ್ ಕಲೆಕ್ಟರ್ ಅವಿನಾಶ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!