ಪರಿಸರ

ಚಿಕ್ಕತ್ತೂರು ಸಾರ್ವಜನಿಕ ಆಟದ ಮೈದಾನದಲ್ಲಿ ವಿಶ್ವ ಪರಿಸರ ದಿನಾಚರಣೆ

ಕುಶಾಲನಗರ, ‌ಜೂ 05: ಚಿಕ್ಕತ್ತೂರು ಸಾರ್ವಜನಿಕ ಆಟದ ಮೈದಾನದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಮೈದಾನದಲ್ಲಿ ಸ್ವಚ್ಛತೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಸಾಮಾಜಿಕ ಅರಣ್ಯ ಇಲಾಖೆ , ಎಸ್ ಎಲ್ ಎನ್ ಕಾಫಿ ಪ್ರೈವೇಟ್ ಲಿಮಿಟೆಡ್ ಹಾಗೂ ಗ್ರಾಮ ಪಂಚಾಯಿತಿ ಕೂಡು ಮಂಗಳೂರು ಇವರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ಸಾಮಾಜಿಕ ಅರಣ್ಯದ ವಲಯ ಅರಣ್ಯ ಅಧಿಕಾರಿ ಹರೀಶ್ ಎಸ್ ಎಲ್ ಎನ್ ಕಾಫಿ ಪ್ರೈವೇಟ್ ಲಿಮಿಟೆಡ್ನ ಮ್ಯಾನೇಜರ್ ಸೋಮಯ್ಯ ಗ್ರಾಮ ಪಂಚಾಯತ್ ಸದಸ್ಯರಾದ ಹೆಚ್ಆರ್ ಪಾರ್ವತಮ್ಮ ರಾಮೇಗೌಡ. ಸೈನಿಕ ಶಾಲೆಯ ಉಪ ಅಭಿಯಂತರರು ಶ್ರೀನಿವಾಸ್ ರಮೇಶ್ ,ಕುಮಾರ್ ಕೆ ಜೆ, ಶ್ರೀನಿವಾಸ್ ಎ ಚೇತನ್ ಕುಮಾರ್ ಶಿವಕುಮಾರ್ ಶ್ರೀನಿವಾಸ ಸಿ ಸಿ, ಶಶಿಧರ್ ಅನು ಕುಮಾರ್ ಹಾಗೂ ಎಸ್ ಎಲ್ ಎನ್ ರವರ ಸಿಬ್ಬಂದಿ ವರ್ಗ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಚಿಕ್ಕತೂರಿನ ಗ್ರಾಮಸ್ಥರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!