
ಕುಶಾಲನಗರ, ಜೂ 03: ಸೋಮವಾರಪೇಟೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ 2025-26ನೇ ಸಾಲಿನ 1ನೇ ಮತ್ತು 2ನೇ ತರಗತಿಯ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭೋತ್ಸವ ಮತ್ತು ಉದ್ಘಾಟನಾ ಕಾರ್ಯಕ್ರಮ ಹೆಚ್.ಆರ್.ಪಿ.ಕಾಲೋನಿಯ ಅಂಗನವಾಡಿಯಲ್ಲಿ ನಡೆಯಿತು.
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಿಂದಿನ ಕಾಲಕ್ಕೂ ಇಂದಿಗೂ ಕಾಲಘಟಕ್ಕೂ ಮಕ್ಕಳ ಕಲಿಕಾ ವಿಧಾನದಲ್ಲಿ ಬದಲಾವಣೆ ಕಾಣಬಹುದು. ಆಧುನಿಕತೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಬಳಕೆಯಾಗಬೇಕಿದೆ. ಪುಟಾಣಿಗಳ ಕಲಿಕೆಯನ್ನು ಉತ್ತೇಜಿಸಲು ಆಕರ್ಷಣೀಯ ವಾತಾವರಣ ಸೃಷ್ಠಿಸುವ ಅಗತ್ಯತೆ ಎದುರಾಗಿದೆ. ಮಕ್ಕಳು ಕಷ್ಟಪಟ್ಟು ಕಲಿಯುವುದಕ್ಕಿಂತ
ಇಷ್ಟಪಟ್ಟು ಕಲಿಯುವಂತೆ ಶಿಕ್ಷಕರು ಪ್ರೇರೇಪಿಸಬೇಕಿದೆ.
ಶಿಕ್ಷಣವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪೂರಕ ಪರಿಕರಗಳ ಬಳಕೆ ಸಹಕಾರಿಯಾಗಲಿದೆ. ಅಂಗನವಾಡಿಯಲ್ಲಿ ಎಲ್ಕೆಜಿ ಯುಕೇಜಿ ಆರಂಭಿಸುವ
ಸರಕಾರದ ಇಂತಹ ಆಲೋಚನೆ, ಪ್ರಯೋಗ ಸ್ವಾಗತಾರ್ಹ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀದೇವಿ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಬಗ್ಗೆ ವಿವರಿಸಿದರು.
ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಹಾಗೂ ನಾಮನಿರ್ದೇಶಿತ ಸದಸ್ಯ ಜಿ.ಬಿ.ಜಗದೀಶ್ ಮಾತನಾಡಿ, ಸರಕಾರದ ಈ ಯೋಜನೆ ಹಾಗೂ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಸರಕಾರದಿಂದ ಒದಗಿಸಿದ ಎಲ್.ಇ.ಡಿ ಟಿವಿ ಹಾಗೂ ಮಕ್ಕಳ ಪಠ್ಯಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ವಾರ್ಡ್ ಸದಸ್ಯ ಶೈಲಾ ಕೃಷ್ಣಪ್ಪ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಪುರಸಭೆ ಸದಸ್ಯರಾದ ಜಯಲಕ್ಷ್ಮಮ್ಮ ನಂಜುಂಡಸ್ವಾಮಿ, ವಿ.ಜೆ.ನವೀನ್ ಗೌಡ, ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ, ಇಲಾಖೆಯ ಸಂಯೋಜಕಿ ರಂಜಿತಾ, ಅಂಗನವಾಡಿ ಕಾರ್ಯಕರ್ತೆ ಸುಚಿತ್ರಾ ಸೇರಿದಂತೆ ಸುತ್ರಮುತ್ತಲಿನ ಅಂಗನವಾಡಿಗಳ ಕಾರ್ಯಕರ್ತರು, ಪೋಷಕರು ಇದ್ದರು.
Back to top button
error: Content is protected !!