ಕುಶಾಲನಗರ, ಜೂ 03: ಹಾರಂಗಿ ಅಣೆಕಟ್ಟೆಯಿಂದ ನದಿಗೆ ನೀರು ಬಿಡುಗಡೆಗೆ ಸಿದ್ದತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಸೂಚನೆ ಹಿನ್ನಲೆಯಲ್ಲಿ ಎಮರ್ಜೆನ್ಸಿ ಗೇಟ್ ಮೂಲಕ ಅಣೆಕಟ್ಟೆಯಿಂದ ಪ್ರತಿದಿನ 1 ಸಾವಿರ ಕ್ಯೂಸೆಕ್ ಪ್ರಮಾಣದ ನೀರನ್ನು ಹರಿಬಿಡಲಾಗುತ್ತದೆ. 2859 ಅಡಿ ಸಂಗ್ರಹ ಪ್ರಮಾಣದ ಅಣೆಕಟ್ಟೆಲ್ಲಿ ಇದೀಗ 2851 ಅಡಿಗಳಷ್ಟು ನೀರು ಶೇಖರಣೆಯಿದೆ. 7 ಅಡಿಗಳ ಅಂತರ ಕಾಯ್ದುಕೊಂಡು ನೀರನ್ನು ಹರಿಬಿಡಲಾಗುತ್ತದೆ. ಸಂಭಾವ್ಯ ಪ್ರವಾಹದ ಬಗ್ಗೆ ನದಿ ತಟದ ನಿವಾಸಿಗಳು ಎಚ್ಚರವಹಿಸುವಂತೆ ನೀರಾವರಿ ಇಲಾಖೆ ಪ್ರಕಟಣೆ ಹೊರಡಿಸಿದೆ.
Back to top button
error: Content is protected !!