ಧಾರ್ಮಿಕ

ಹೆಗ್ಗಡಹಳ್ಳಿಯಲ್ಲಿ ಶ್ರದ್ದಾಭಕ್ತಿಯಿಂದ ನಡೆದ ಶನೈಶ್ವರ್ ಸ್ವಾಮಿ ಜಯಂತಿ

ಕುಶಾಲನಗರ, ಮೇ. 27: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ವರ ಸ್ವಾಮಿ ದೇವಸ್ಥಾನ ವತಿಯಿಂದ ಶನೈಶ್ಚರ ಸ್ವಾಮಿ ಜಯಂತಿ ಪೂಜಾ ಕಾರ್ಯಕ್ರಮ ಬೆಳಿಗ್ಗಿನಿಂದಲೇ ವಿವಿಧ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ಶ್ರಧ್ಧಾಭಕ್ತಿಯಿಂದ ನೆರವೇರಿಸಿದವು.
ಜಯಂತಿಯ ಅಂಗವಾಗಿ ದೇವಾಲಯದ ಆವರಣದಲ್ಲಿ ಗಣಯಾಗ, ಸಗ್ರಹಾಮಕ ಶನಿ ಶಾಂತಿ ಹೋಮ, ನವಕಲಶಾರಾಧನೆ, ಪ್ರಧಾನ ಹೋಮ, ಸ್ವಾಮಿಗೆ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ ಸೇರಿದಂತೆ ವಿಶೇಷ ಹೋಮ ಹವನಗಳು ದೇವಾಲಯ ಆವರಣದಲ್ಲಿ ನಡೆದವು. ನಂತರ 12 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿತರಣೆ ಕಾರ್ಯಕ್ರಮ ನಡೆದವು.
ಸಂಜೆ 4.30. ಗಂಟೆಗೆ ಶ್ರೀ ಶನೈಶ್ಚರ ಸ್ವಾಮಿ ವಿಗ್ರಹವನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ದೇವಾಲಯದಿಂದ ಹಾರಂಗಿ ನದಿಯವರೆಗೆ ಮಂಗಳ ವಾದ್ಯಗಳೊಂದಿಗೆ ಸಾಗಿ ನದಿಯಲ್ಲಿ ಶ್ರೀ ಸ್ವಾಮಿಗೆ ಗಂಗಾ ಸ್ನಾನ, ರಂಗ ಪೂಜೆ ನಡೆಸಿ ನಂತರ ಮೆರವಣಿಗೆಯ ಮೂಲಕ ಸ್ವ ಸ್ಧಳ ಬರಲಾಯಿತು. ಪೂಜಾ ಕೈಂಕರ್ಯಗಳನ್ನು ಗೋಪಾಲ ಕೃಷ್ಣ ಉಡುಪ ತಂಡದವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಎಸ್. ಆರ್. ಸುನಿಲ್ ರಾವ್‌, ಕೂಡಿಗೆ ಸಹಕಾರ ಸಂಘದ ನಿರ್ದೇಶಕ ಎಸ್. ಆರ್.ಅರುಣ್ ರಾವ್, ನಾಗರಾಜು ,ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!