ಕುಶಾಲನಗರ, ಮೇ 17: ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯಿಂದ ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಬಿಜಿಎಸ್ ಕಪ್ ರಾಜ್ಯಮಟ್ಟದ ಕಬ್ಬಡಿ ಹಬ್ಬ ಜನಮನ ರಂಜಿಸಿತು.
ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಬಡ್ಡಿ ಹಬ್ಬದಲ್ಲಿ ರಾಜ್ಯಾದ್ಯಂತ 30 ತಂಡಗಳು ಪಾಲ್ಗೊಂಡಿದ್ದವು. ಈ ಕಬಡ್ಡಿ ಹಬ್ಬದಲ್ಲಿ ಪ್ರೋ ಕಬಡ್ಡಿ ಆಟಗಾರರು ಪಾಲ್ಗೊಂಡಿದ್ದು ವಿಶೇಷ ಜನಾಕರ್ಷಣೆಯಾಗಿತ್ತು.
ಕಬಡ್ಡಿ ಕ್ರೀಡಾಕೂಟದಲ್ಲಿ ಬೆಂಗಳೂರು ತಂಡ ಪ್ರಥಮ, ಮೈಸೂರು ದ್ವಿತೀಯ, ಬಾಗಲಕೋಟೆ ತೃತೀಯ ಹಾಗೂ ಬೆಳಗಾವಿ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಕಬಡ್ಡಿ ವಿಜೇತರು ಸೇರಿದಂತೆ ಸಮುದಾಯ ಬಾಂಧವರಿಗೆ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮಾತನಾಡಿ ಕಬಡ್ಡಿ ಹಬ್ಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಮುಂದುವರೆಸುವಂತೆ ಶುಭ ಹಾರೈಸಿದರು.
ಆದಿಚುಂಚನಗಿರಿ ಕೊಡಗು ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭ ದಾನಿ ಹಾಗೂ ಸಮಾಜ ಸೇವಕ ಕಿರಗಂದೂರು ಪದ್ಮನಾಭ, ಜಿಪಂ ಮಾಜಿ ಸದಸ್ಯರಾದ ವಿ.ಪಿ.ಶಶಿಧರ್, ಬಿ.ಬಿ.ಭಾರತೀಶ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಪ್ರೋ ಕಬಡ್ಡಿ ತಂಡದ ಕೋಚ್ ಬಿ.ಸಿ.ರಮೇಶ್, ಮೇ.ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಬಿ.ಸಿ.ಸುರೇಶ್, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ, ಒಕ್ಕಲಿಗ ಯುವ ವೇದಿಕೆ ತಾಲೂಕು ಅಧ್ಯಕ್ಷ ಜೈರಾಜ್, ಜಿಲ್ಲಾ ಖಜಾಂಚಿ ಚಂದ್ರಶೇಖರ್ ಹೇರೂರು, ಸಂಘಟನಾ ಕಾರ್ಯದರ್ಶಿ ಕಿರಣ್, ಪ್ರಮುಖರಾದ ಸಂತೋಷ್, ಪ್ರೋ ಕಬಡ್ಡಿ ಆಟಗಾರ ಅವಿನಾಶ್ ಸೇರಿದಂತೆ ಪ್ರಮುಖರಾದ ಎಂ
ಎಲ್. ಗೌತಮ್, ಸಂತೋಷ್, ಅಭಿಷೇಕ್, ಸುನಿತ್ ಕುಮಾರ್, ಗಿರೀಶ್, ಪ್ರವೀಣ್ ಮತ್ತಿತರರು ಇದ್ದರು.
Back to top button
error: Content is protected !!