ಕುಶಾಲನಗರ, ಮೇ 14: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಇಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ನಿವಾಸಿಯಾದ ಬಿ.ಪಿ. ಸಚಿನ್ ಕುಮಾರ್ ರವರು ದಿನಾಂಕ: 13-05-2025 ರಂದು ಸಮಯ ಸುಮಾರು 04.30 ಘಂಟೆಗೆ ಮನೆಯಲ್ಲಿರುವ ಸಂದರ್ಭ ಬಾಳೇರ ಟಿಮ್ಸನ್ ಹಾಗೂ ಟಿಮ್ಸನ್ ನ ತಾಯಿ ಜ್ಯೋತಿ ಕಾರಿನಲ್ಲಿ ಮನೆಯ ಬಳಿಗೆ ಬಂದು ನಿನ್ನೊಂದಿಗೆ ಮಾತನಾಡಬೇಕು ಎಂದು ಕರೆದು ಜಗಳ ಮಾಡಲು ಪ್ರಾರಂಭಿಸಿದ್ದು, ಜೋರಾಗಿ ಬೊಬ್ಬೆ ಶಬ್ದ ಕೇಳಿ ಸಚಿನ್ ಕುಮಾರ್ ಚಿಕ್ಕಪ್ಪನ ಮಗ ರೋಷನ್ ಕುಮಾರ್ ಸ್ಥಳಕ್ಕೆ ಬಂದಿದ್ದು, ಟಿಮ್ಸನ್ ರೋಷನ್ ಕುಮಾರ್ ಗೂ ಸಹ ನಿಂಧಿಸಿ ತಲೆಗೆ ಹೊಡೆದಿದ್ದಾನೆ. ನಂತರ ಪಕ್ಕದಲ್ಲಿಯೇ ಇದ್ದ ಟಿಮ್ಸನ್ ತಾಯಿ ಜ್ಯೋತಿ ಸಚಿನ್ ಕುಮಾರ್ ಎಡ ಬೆನ್ನಿಗೆ ಕಚ್ಚಿರುವುದು ಹಾಗೂ ಟಿಮ್ಸನ್ ಕಾರಿನಲ್ಲಿ ಇಟ್ಟಿದ್ದ ರಿವಾಲ್ವರ್ನಿಂದ ಏಕಾಏಕಿ ಸಚಿನ್ ಬಲಗಾಲಿಗೆ ಮತ್ತು ರೋಷನ್ ಕುಮಾರ್ ಎಡ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಸಚಿನ್ ಕುಮಾರ್ ಮತ್ತು ರೋಷನ್ ಕುಮಾರ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಗುಂಡು ಹರಿಸಿರುವ ಟಿಮ್ಸನ್ ಮತ್ತು ಜ್ಯೋತಿ ರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸ್ವೀಕರಿಸಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಕಲಂ: 115(2), 118(1), 352, 109, 3(5) ಬಿಎನ್ಎಸ್ ಮತ್ತು 3, 25 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಸಚಿನ್ ಕುಮಾರ್ ಮತ್ತು ರೋಷನ್ ಕುಮಾರ್. ವಿಚಾರಣೆ ಸಂದರ್ಭ ಆಸ್ತಿ ವಿಚಾರಕ್ಕಾಗಿ ಜಗಳ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುತ್ತದೆ.
ಸದರಿ ಪ್ರಕರಣದ ಘಟನೆ ಸ್ಥಳಕ್ಕೆ ಹಿರಿಯ ಅಧಿಕಾರಿ/ಸಿಬ್ಬಂದಿಯವರುಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ಆರೋಪಿ ಪತ್ತೆಗಾಗಿ ಶ್ರೀ ಮಹೇಶ್ ಕುಮಾರ್, ಡಿಎಪಿ, ವಿರಾಜಪೇಟೆ ಉಪವಿಭಾಗ, ಶ್ರೀ ಶಿವರುದ್ರ ಬಿ.ಎಸ್, ಸಿಪಿಐ, ಕುಟ್ಟಿ ವೃತ್ತ, ಶ್ರೀ ರವೀಂದ್ರ, ಪಿಎಸ್ಐ, ಶ್ರೀಮಂಗಲ ಪೊಲೀಸ್ ಠಾಣೆ & ಠಾಣಾ ಅಪರಾಧ ಪತ್ತೆ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ಸದರಿ ಅಪರಾಧ ಕೃತ ನಡೆಸಿದ ಬೆಳ್ಳೂರು ಗ್ರಾಮದ ನಿವಾಸಿಯಾದ ಆರೋಪಿ ಬಾಳೇರ ಟಿಮ್ಸನ್, (36 ವರ್ಷ) ಮತ್ತು ಬಾಳೇರ ಜ್ಯೋತಿ, (63 ವರ್ಷ) ಎಂಬುವವರನ್ನು ದಿನಾಂಕ: 14-05-2025 ರಂದು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿ ಬಾಳೇರ ಟಿಮ್ಸನ್ ತಾನು ಹೊಂದಿದ್ದ ರಿವಾಲ್ವರ್ ಅನ್ನು ದುರುಪಯೋಗ ಪಡಿಸಿರುವುದರಿಂದ ಹಾಗೂ ಇದ್ದಕ್ಕಿದ್ದಂತೆ ಪ್ರಚೋದನೆಗೊಂಡು ಆತ್ಮಹತ್ಯೆ ಅಥವಾ ಕೊಲೆ ಮಾಡುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತ ಕ್ರಮವಾಗಿ ಸದರಿ ರಿವಾಲ್ವರ್ನ ಜಮ್ಮಾ ವಿನಾಯಿತಿಯನ್ನು ರದ್ದುಗೊಳಿಸುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ ರವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
Back to top button
error: Content is protected !!