ಕುಶಾಲನಗರ, ಫೆ 22: ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ 50ನೇ ಕಾರ್ಯಕ್ರಮವಾಗಿ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ನುಡಿನಮನ ಹಾಗೂ ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಕುಶಲೋತ್ಸವ ಫೆ.25 ರಂದು ಮಂಗಳವಾರ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಹೇಳಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಮಾಹಿತಿ ನೀಡಿದ ಅವರು, ಕುಶಾಲನಗರ ತಾಲ್ಲೂಕಿನ ಅಭಿವೃದ್ಧಿ ಹರಿಕಾರ ದಿ.ಗುಂಡೂರಾವ್ ಹಾಗೂ ರೈತರ ಜೀವನಾಡಿ ಹಾರಂಗಿ ಜಲಾಶಯದ ನಿರ್ಮಾತೃ ವೀರೇಂದ್ರ ಪಾಟೀಲರನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದ್ದು,ಅಂದು ಬೆಳಿಗ್ಗೆ 8 ಗಂಟೆಗೆ ಕೊಡಗು-ಮೈಸೂರು ಗಡಿಯಲ್ಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಭವ್ಯ ಮಂಟಪದ ಮೆರವಣಿಗೆ ನಡೆಯಲಿದೆ.ಈ ಮೆರವಣಿಗೆಗೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ರೈತ ಸಹಕಾರ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು.ಶಾಸಕ ಡಾ.ಮಂತರ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಉಸ್ತುವಾರಿ ಸಚಿವ ಬೋಸರಾಜು ಗುಂಡೂರಾವ್ ಸಭಾಂಗಣ ಉದ್ಘಾಟಿಸಲಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕುಶಲಸಿರಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಪಶುಪಾಲನಾ ಸಚಿವ ವೆಂಕಟೇಶ್ ಅವರು ವೀರೇಂದ್ರ ಪಾಟೀಲ್ ಸಭಾಂಗಣ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ತಂಬೆಲರು ಕೃತಿ ಬಿಡುಗಡೆ ಮಾಡುವರು.
ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ಶಾಸಕರಾದ ಎ.ಮಂಜು,ಸುಜಾಕುಶಾಲಪ್ಪ,ಹರೀಶ್ ಗೌಡ,ರವಿಶಂಕರ್,ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್,ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್,ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನೀರು ಬಳಕೆದಾರರ ಮಹಾಮಂಡಲ ಅಧ್ಯಕ್ಷ ಚೌಡೇಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಳಗದ ವತಿಯಿಂದ ಕುಶಲಸಿರಿ ಪ್ರಶಸ್ತಿಯನ್ನು ಮಾಜಿ ಸಚಿವ ಡಿ.ಎಚ್.ಶಂಕರಮೂರ್ತಿ,ಮಾಜಿ ಸಚಿವ ಬಿ.ಎ.ಜೀವಿಜಯ,ಮಾಜಿ ಸಂಸದ ಪ್ರತಾಪ್ ಸಿಂಹ,ಮಾಜಿ ಶಾಸಕರಾದ ಕೈಲಾಶ್ ನಾಥ ವೀರೇಂದ್ರ ಪಾಟೀಲ್,ಬಸವರಾಜು, ಸ್ಥಳೀಯ ಮುಖಂಡರಾದ ವಿ.ಪಿ.ಶಶಿಧರ್, ಆರ್.ಕೆ.ನಾಗೇಂದ್ರಬಾಬು,ಕೆ.ಪಿ.ಚಂದ್ರಕಲಾ,ನಾರಾಯಣ್, ಟಿ.ಎನ್
ನಾರಾಯಣ್, ಶರವಣಕುಮಾರ್, ಎಂ.ಕೆ.ದಿನೇಶ್ ಅವರಿಗೆ ನೀಡಲಾಗುತ್ತಿದೆ ಎಂದರು.
ಮಧ್ಯಾಹ್ನ 2.30ಕ್ಕೆ ಗೋಷ್ಠಿ, 4 ಗಂಟೆಗೆ ಸಮಾರೋಪ ಹಾಗೂ ಸಂಜೆ 5.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜನಪದೋತ್ಸವ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಕೆ.ಎಸ್.ಕೃಷ್ಣೇಗೌಡ, ಕೆ.ಕೆ.ನಾಗರಾಜಶೆಟ್ಟಿ, ಆವರ್ತಿ ಮಹದೇವಪ್ಪ ಇದ್ದರು.
Back to top button
error: Content is protected !!